ಮೂಡಲಗಿಯಲ್ಲಿ ಅದ್ದೂರಿ ಅಯ್ಯಪ್ಪಸ್ವಾಮಿ ಜಂಬೂಸವಾರಿ

ಮೂಡಲಗಿ ಪಟ್ಟಣದಲ್ಲಿ ಆಯೋಜಿಸಿದ್ದ ಅಯ್ಯಪ್ಪ ಸ್ವಾಮಿ ಮೂರ್ತಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಜರುಗಿತು. ಗುರುಸ್ವಾಮಿಗಳಾದ ರಾಜು ಶೆಟ್ಟಿ , ರವಿ, ಶಬರೀಶ ಘಣ್ಯಗಂ ಸೇರಿ ಮತ್ತಿತರರು ಭಾಗವಹಿಸಿದ್ದರು.
ಮೂಡಲಗಿ ಪಟ್ಟಣದಲ್ಲಿ ಆಯೋಜಿಸಿದ್ದ ಅಯ್ಯಪ್ಪ ಸ್ವಾಮಿ ಮೂರ್ತಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಜರುಗಿತು. ಗುರುಸ್ವಾಮಿಗಳಾದ ರಾಜು ಶೆಟ್ಟಿ , ರವಿ, ಶಬರೀಶ ಘಣ್ಯಗಂ ಸೇರಿ ಮತ್ತಿತರರು ಭಾಗವಹಿಸಿದ್ದರು.
Published on
ಯಲ್ಲಮ್ಮ ದೇವಸ್ಥಾನದ ಬಳಿಯಿಂದ ಆರಂಭವಾದ ಆನೆ-ಅಂಬಾರಿ ಮೆರವಣಿಗೆಗೆ ಬೈಂದೂರದ ರಾಜು ಶೆಟ್ಟಿ ಗುರುಸ್ವಾಮಿ, ಪಟ್ಟಣದ ರವಿ ಗುರುಸ್ವಾಮಿ, ಇಟನ್ಯಾಳದ ಸಿದ್ಧೇಶ್ವರ ಆಶ್ರಮದ ಸಿದ್ದೇಶ್ವರ ಶ್ರೀ, ಹಳ್ಳೂರ ಸನ್ನಿಧಾನದ ನಿಂಗಪ್ಪ ಗುರುಸ್ವಾಮಿ, ಕಷ್ಣಪ್ಪ ಗಿರೆಣ್ಣವರ ಗುರುಸ್ವಾಮಿ ಹಾಗೂ ಪತ್ರಕರ್ತ ಮಲ್ಲು ಬೋಳನವರ, ಬಾಳಯ್ಯ ಹಿರೇಮಠ ಚಾಲನೆ ನೀಡಿದರು.
ಅಯ್ಯಪ್ಪ ಸ್ವಾಮಿಯ ಮೂರ್ತಿ ಮೆರವಣಿಗೆಗೆ ಒಂಟೆ, ಕುದುರೆಗಳು, ಝಾಂಜ್‌ಪಥಕ, ಡೊಳ್ಳು ಕುಣಿತ, ಸಾರವಾಡ ಗೊಂಬೆಗಳ ಕುಣಿತ, ವಿವಿಧ ವಾದ್ಯ ಮೇಳ, ಕುಂಭೋತ್ಸವ ಮೆರಗು ನೀಡಿದವು. ಮೆರವಣಿಗೆಯು ಪಟ್ಟಣದ ಶಿವಬೋಧರಂಗ ಮಠ, ಯಲ್ಲಮ್ಮ ದೇವಸ್ಥಾನ, ಸಂಗಪ್ಪನ ವತ್ತ, ಕಲ್ಮೇಶ್ವರ ವತ್ತ, ಚನ್ನಮ್ಮ ವತ್ತ, ಕರೆಮ್ಮಾದೇವಿ ವತ್ತಗಳ ಮಾರ್ಗವಾಗಿ ಸಾಗಿ ಬಸವೇಶ್ವರ ವತ್ತದ ಹತ್ತಿರದ ಬಸವ ಮಂಟಪದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿಧಾನ ತಲುಪಿತು.
ಮೆರವಣಿಗೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಸೈನಿಕ ಕೇಂದ್ರದ ಶಿಬಿರಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮದಲ್ಲಿ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿ, ಮುನ್ಯಾಳ-ರಂಗಾಪುರದ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಗುರುಸ್ವಾಮಿಗಳಾದ ಶಬರೀಶ ಘಣ್ಯಗಂ, ಬಾಗಲಕೋಟೆಯ ಲಕ್ಷ್ಮಣ ಅ್ಜಲಪುರ, ಬೆಳಗಾವಿಯ ಮಾರುತಿ ಗುರುಸ್ವಾಮಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net