ಅಂಗನವಾಡಿ ಮಕ್ಕಳಿಗೆ ಎಳೆ ಬಿಸಿಲಿನ ಆಟ

ಬೆಳಗಾವಿ ಮಹಾದ್ವಾರ ರಸ್ತೆಯ ವಿಠ್ಠಲ ಮಂದಿರದ ಎದುರಿನಲ್ಲಿ ಎಳೆ ಬಿಸಿಲಿನ ಆಟೋದಲ್ಲಿ ತೊಡಗಿರುವ ಅಂಗನವಾಡಿ ಮಕ್ಕಳು.
ಬೆಳಗಾವಿ ಮಹಾದ್ವಾರ ರಸ್ತೆಯ ವಿಠ್ಠಲ ಮಂದಿರದ ಎದುರಿನಲ್ಲಿ ಎಳೆ ಬಿಸಿಲಿನ ಆಟೋದಲ್ಲಿ ತೊಡಗಿರುವ ಅಂಗನವಾಡಿ ಮಕ್ಕಳು.
Published on
ಡಿ.ವಿ.ಕಮ್ಮಾರ
ಬೆಳಗಾವಿ : ಸದ್ಯ ಚಳಿಗೆ ಬೆಳಗಾವಿಯಲ್ಲಿ ಶೀತ ವಾತಾವರಣ ಹೆಚ್ಚಾಗಿದೆ. ಮನೆ ಮತ್ತು ವಿವಿಧ ಕಟ್ಟಡಗಳ ಗೋಡೆಗಳು ತಂಪು ತಂಪು, ನೆಲಹಾಸು ಬೆಳ್ಳಂಬೆಳಗ್ಗೆ ಜುಮ್ಮೆನ್ನಿಸುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಳೆ ಮಕ್ಕಳು ಅಂಗನವಾಡಿಗಳಿಗೆ ಬರುವುದೇ ದುಸ್ತರವಾಗಿದ್ದು, ಮಕ್ಕಳ ಚಳಿ ಓಡಿಸುವ ಜತೆಗೆ ಅವರನ್ನು ಆರೋಗ್ಯಯುತರನ್ನಾಗಿ ಮಾಡಿ ಹಾಜರಾತಿ ಕೊರತೆಯನ್ನು ನೀಗಿಸಲು ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾಡಿರುವ ಉಪಾಯವೊಂದು ಪ್ರಶಂಸೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಅಂಗನವಾಡಿಯಲ್ಲಿ ಆಟೋಟದ ಜತೆಗ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಪೂರ್ವ ಪ್ರಾಥಮಿಕಕ್ಕೆ ಪೂರಕವಾದ ಪಾಠ ಹೇಳಲಾಗುತ್ತದೆ. ಎಲ್ಲ ಆಟೋಗಳು ಕೊಠಡಿಯಲ್ಲೇ ಇರುತ್ತದೆ. ಈಚೆಗೆ ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬಹುತೇಕ ಎಲ್ಲ ಅಂಗನವಾಡಿ ಕಟ್ಟಡಗಳು ನೆಲಮಹಡಿಯಲ್ಲಿದ್ದು, ತಂಪನಿಂದ ಫ್ರಿಜ್‌ನಂತಾಗಿವೆ. ಇದರಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲಾಗದು. ಇದರಿಂದ ಎಷ್ಟೋ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಯೆ ಕಳುಹಿಸಿವುದಕ್ಕೂ ಹೆದರುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಕೆಲ ಅಂಗನವಾಡಿ ಕಾರ್ಯಕರ್ತೆಯರು ಮಾಡಿರುವ ‘ಎಳೆ ಬಿಸಿಲಿನ ಆಟ’ ಈಗ ಫೇಮಸ್ ಆಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಬೆಳಗಿನ ಹೊತ್ತಿನಲ್ಲೇ ಕ್ಲಾಸ್‌ರೂಮ್ ಬದಲಿಗೆ ಮಕ್ಕಳನ್ನು ಅಂಗಳಕ್ಕೆ ಕರೆದುಕೊಂಡು ಬರುತ್ತಿರುವ ಕಾರ್ಯಕರ್ತೆಯರು, ಎಳೆ ಮಕ್ಕಳ ಬೆಳವಣಿಗೆಗೆ ಪೂರಕವಾದ ಒಂದಷ್ಟು ಪುಟ್ಟ ವ್ಯಾಯಾಮ ಮಾಡಿಸುತ್ತಿದ್ದಾರೆ. ಬಳಿಕ ಹೆಚ್ಚಿನ ಸಮಯವನ್ನು ಆಟೋಟಕ್ಕೆ ನೀಡುತ್ತಿದ್ದು, ಎಳೆ ಬಿಸಿಲು ಕಾಯಿಸಿಕೊಳ್ಳುತ್ತಳೇ ಮಕ್ಕಳು ಆಟವಾಡುತ್ತಿದ್ದಾರೆ. ಇಂದರಿಂದಗಿ ಚಳಿಯಿಂದ ಮಕ್ಕಳು ಬಿಸಿಯಾಗುವ ಜತೆಗೆ ಬೆಳವಣಿಗೆ ಹಂತದಲ್ಲಿ ಬೇಕಾಗುವ ಡಿ ವಿಟಮಿನ್ ಸೂರ್ಯನ ಎಳೆ ಕಿರಣಗಳಿಂದಾಗಿ ಹೇರಳವಾಗಿ ಸಿಗುತ್ತಿದೆ. ಇದು ಮಕ್ಕಳನ್ನು ಸದೃಢವನ್ನಾಗಿ ಮಾಡಿದೆ.
ಇದನ್ನು ಮೊದಲು ಆರಂಭಿಸಿದ್ದು ಯಾರು? ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಶಹಾಪುರ, ಮಹದ್ವಾರ ರಸ್ತೆ, ಖಾಸಬಾಗ ಭಾಗದ ಕೆಲ ಅಂಗನವಾಡಿಯವರು ಮೊದಲು ಆರಂಭಿಸಿದ್ದಾರೆಂದು ಹೇಳಲಾಗುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಿ, ಬಹುತೇಕ ಎಲ್ಲ ಅಂಗನವಾಡಿಗಳಲ್ಲೂ ಇದೇ ತಂತ್ರ ಅನುಸರಿಸುತ್ತಾರೆ.

ಮಕ್ಕಳ ಸರ್ವಾಂಗೀಣ ವಿಕಾಸ ಅಂಗನವಾಡಿ ಕೇಂದ್ರಗಳ ಮೂಲ ಧ್ಯೇಯ. ಬಹಳಷ್ಟು ಅಂಗನವಾಡಿಗಳಲ್ಲಿ ಉತ್ತಮ ಶಿಕ್ಷಣ ಹೊಂದಿರುವ ಅತ್ಯಂತ ಕ್ರಿಯಾಶೀಲ ಕಾರ್ಯಕರ್ತೆಯರಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಸಕಾರಾತ್ಮಕವಾದ ಚಟುವಟಿಕೆ ಹಮ್ಮಿಕೊಳ್ಳಲು ಮುಕ್ತ ಅವಕಾಶವಿದೆ. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಆದರ್ಶ ಕಾರ್ಯವನ್ನು ಇಲಾಖೆ ಬೆಂಬಲಿಸುತ್ತದೆ.

----

ಬೆಳೆಯುವ ಮಕ್ಕಳಿಗೆ ಚಳಿಗಾಲದಲ್ಲಿ ಬೆಳಗ್ಗೆ 9ರಿಂದ 11ರವರೆಗಿನ ಎರಡು ತಾಸಿನ ಅವಧಿಯ ಎಳೆ ಬಿಸಿಲು ಸ್ವಲ್ಪ ಕಾಯಿಸಿಕೊಳ್ಳುವುದು ಉತ್ತಮ ಎಂದು ವೈದ್ಯರೂ ಹೇಳುತ್ತಾರೆ. ಮಕ್ಕಳಿಗೆ ವಿಡಮಿನಟ್ ಡಿ ಲಭಿಸಿ, ಮಿದುಳಿನ ಬೆಳವಣಿಗೆಯಾಗುತ್ತದೆ. ಕಾಮಾಲೆ ಅಪಾಯ ತಪ್ಪುತ್ತದೆ. ಅನೇಕ ಸೋಂಕುಗಳಿಂದಲೂ ಮಕ್ಕಳು ರಕ್ಷಿಸಲ್ಪಡುತ್ತಾರೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ.

---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net