ಒಗ್ಗಟ್ಟಿನ ಸಂದೇಶ ಸಾರುವ ಹಬ್ಬ

ಸವದತ್ತಿ ಗ್ರಾಮದೇವಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಜಗದೀಶ ಶೆಟ್ಟರ ಅವರನ್ನು ಶಾಸಕ ವಿಶ್ವಾಸ ವೈದ್ಯ, ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಸನ್ಮಾನಿಸಿದರು.ಸದಾಶಿವ ಕೌಜಲಗಿ ಇತರರಿದ್ದರು.
ಸವದತ್ತಿ ಗ್ರಾಮದೇವಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಜಗದೀಶ ಶೆಟ್ಟರ ಅವರನ್ನು ಶಾಸಕ ವಿಶ್ವಾಸ ವೈದ್ಯ, ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಸನ್ಮಾನಿಸಿದರು.ಸದಾಶಿವ ಕೌಜಲಗಿ ಇತರರಿದ್ದರು.
Published on
ಸವದತ್ತಿ: ಭಾರತದಲ್ಲಿ ನಡೆಯುವ ಜಾತ್ರೆ ಹಾಗೂ ಹಬ್ಬಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟಿನ ಸಂದೇಶ ಸಾರುತ್ತಿವೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಜರುಗಿದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿ, ವಿದೇಶಗಳಲ್ಲಿ ಯುದ್ಧಗಳಿಂದ ಅಶಾಂತಿ ಉಂಟಾಗುತ್ತಿರುವ ಸಂದರ್ಭದಲ್ಲಿ ಭಾರತ ಸಂಸ್ಕೃತಿ ಜನರನ್ನು ಒಂದಾಗಿಸುವ ಕಾರ್ಯ ಮಾಡುತ್ತಿದೆ. ಜಾತ್ರೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಜೋಡೆತ್ತಿನಂತೆ ಶ್ರಮಿಸುತ್ತಿದ್ದು, ಅವರ ಒಗ್ಗಟ್ಟು ಮತ್ತು ಸಹಕಾರದಿಂದ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಲ್ಲಾ ತೊರಗಲ್ಲದ ಗಚ್ಚಿನ ಸಂಸ್ಥಾನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಯಕ್ಕುಂಡಿಯ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಮಹಾಂತೇಶ ಶಾಸಿ ಆರಾದ್ರಿಮಠ ಹಾಗೂ ಮಡಿವಾಳಯ್ಯ ಉಪನ್ಯಾಸ ನೀಡಿದರು.
ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯಿಂದ ಚಿದಾನಂದ ಅವಧೂತರು ರಚಿಸಿದ ಶ್ರೀದೇವಿ ಮಹಾತ್ಮ ಚರಿತಾಮೃತ ಪ್ರವಚನ ನಡೆಯಿತು.
ಸನ್ಮಾನ: ದೇವಿಗೆ ಬೆಳ್ಳಿ ಕಿರೀಟ ಹಾಗೂ ಆಭರಣ ದಾನ ಮಾಡಿದ ಅರುಣ ರಾವಳ, ಶಂಕರ ಮುತಗೊಂಡ, ಬಾಬು ಇನಾಮತಿ, ಗದಿಗೆಪ್ಪ ಬಂಡಿಗಾರ, ಧರೆಪ್ಪ ಮಡ್ಲಿ ಅವರನ್ನು ಸನ್ಮಾನಿಸಲಾಯಿತು. ಅನ್ನಪ್ರಸಾದಕ್ಕೆ ಅಕ್ಕಿ ದಾನ ಮಾಡಿದ ಮಹಾಂತೇಶ ಗಡೇಕಾರ, ಸದಾಶಿವ ಕೌಜಲಗಿ, ಅಶ್ವತ್ಥ ವೈದ್ಯ, ಎಂ.ಎಸ್. ಪುರದಗುಡಿ, ಬಿ.ಎನ್.ಪ್ರಭುನವರ, ಶಿವಾನಂದ ಹೂಗಾರ, ಚಂದ್ರು ಶಾಮರಾಯನವರ, ಮಲ್ಲಿಕಾರ್ಜುನ ಬೇವೂರ, ಪ್ರಭು ಪ್ರಭುನವರ, ಸಚಿನ ವಾಣಿ, ಕುಮಾರ ಕೌಜಲಗಿ, ಸಿ.ಎಸ್.ಪಟ್ಟಣಶೆಟ್ಟಿ, ಮದನಲಾಲ ಚೋಪ್ರಾ, ವೀರೇಶ ಬ್ಯಾಹಟ್ಟಿ, ಸುರೇಶ ಚೋಪ್ರಾ, ಅಮೀರ್ ಗೋರಿನಾಯ್ಕ, ವೆಂಕಣ್ಣ ವೈದ್ಯ, ಕಲಂ ಚೂರಿಖಾನ, ಸೋಮಲಿಂಗ ಬೆಳವಡಿ ಅವರನ್ನು ಸನ್ಮಾನಿಸಲಾಯಿತು. ಸಮೀಕ್ಷಾ ಕಕನ್ನವರ, ಸಹನಾ ಬಟಕುರ್ಕಿ ಭರತನಾಟ್ಯ, ವಿಶಾಲಾ ಹಿರೇಮಠ ಕುಚಿಪುಡಿ ನೃತ್ಯ ಪ್ರದರ್ಶಿಸಿದರು. ರಸಮಂಜರಿ ಕಾರ್ಯಕ್ರಮ, ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೆಳೆಯಿತು. ಶಾಸಕ ವಿಶ್ವಾಸ ವೈದ್ಯ, ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಸದಾಶಿವ ಕೌಜಲಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net