ಒಂದೇ ಗ್ರಾಮದ 9 ಜನ ಸೈನ್ಯಕ್ಕೆ ಆಯ್ಕೆ

ಬೆಳಗಾವಿ ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಕೇಂದ್ರದ ವಿವಿಧ ಪಡೆಗಳಿಗೆ ಆಯ್ಕೆಯಾದ ಓಂಕಾರ ಗುರವ, ಜಯ ಪಾಟೀಲ, ರಾಜು ಪಾಟೀಲ, ವಿಜಯ ಪಾಟೀಲ, ಭರಮು ಗುರವ, ರಾಕೇಶ ಪನ್ಹಾಳಕರ, ಸಾಹಿಲ್ ಪಾಟೀಲ, ಸಂಜೀವಿನಿ ಪಾಟೀಲ, ದೀಕ್ಷಾ ದಾಮಣೆಕರರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

Published on
ಬೆಳಗಾವಿ: ತಾಲೂಕಿನ ಕುದ್ರೆಮನಿ ಗ್ರಾಮದ 7 ಜನ ಯುವಕರು ಮತ್ತು ಇಬ್ಬರು ಯುವತಿಯರು ಏಕಕಾಲಕ್ಕೆ ಕೇಂದ್ರದ ವಿವಿಧ ಭದ್ರತಾ ಪಡೆಗಳಿಗೆ ಆಯ್ಕೆಯಾಗಿದ್ದಾರೆ.
ಈಚೆಗೆ ಜರುಗಿದ ಸೈನ್ಯ ಭರ್ತಿ ರ‌್ಯಾಲಿಗಳಲ್ಲಿ ಭಾಗಿಯಾಗಿದ್ದ ಓಂಕಾರ ಗುರವ, ಜಯ ಪಾಟೀಲ, ರಾಜು ಪಾಟೀಲ, ವಿಜಯ ಪಾಟೀಲ, ಭರಮು ಗುರವ, ರಾಕೇಶ ಪನ್ಹಾಳಕರ, ಸಾಹಿಲ್ ಪಾಟೀಲ, ಸಂಜೀವಿನಿ ಪಾಟೀಲ ಮತ್ತು ದೀಕ್ಷಾ ದಾಮಣೆಕರ ಅವರು, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಐಟಿಬಿಪಿಗೆ ಆಯ್ಕೆಯಾಗಿದ್ದಾರೆ.
ಏಕಕಾಲಕ್ಕೆ ತಮ್ಮೂರಿನ ಯುವಕ ಯುವತಿಯರು ಕೇಂದ್ರ ಭದ್ರತಾ ಪಡೆಗಳಿಗೆ ಆಯ್ಕೆಯಾದ ಹಿನ್ನೆಲೆ ಶನಿವಾರ ಸಂಜೆ ಗ್ರಾಮದಲ್ಲಿ ಬಲಭೀಮ ಸಾಹಿತ್ಯ ಸಂಘ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಉಮೇಶ ಗುರವ, ಗ್ರಾಮ ಪಂಚಾಯತ್ ಸದಸ್ಯರಾದ ಶಿವಾಜಿ ಮುರಕುಟೆ, ಶಾಂತಾರಾಮ ಪಾಟೀಲ ಸೇರಿದಂತೆ ಗ್ರಾಮಸ್ಥರು ಸೇರಿ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಸನ್ಮಾನಿಸಿದರು.
--
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net