ಕ್ಯಾಂಪಸ್ ಸಂದರ್ಶನದಲ್ಲಿ 7 ವಿದ್ಯಾರ್ಥಿಗಳು ಆಯ್ಕೆ

ಸಂದರ್ಶನದಲ್ಲಿ ಆಯ್ಕೆಯಾದ ಅಂಕಲಿಯ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯ ವಿದ್ಯಾರ್ಥಿಗಳು. ಶಿಕ್ಷಕರೊಂದಿಗೆ.
ಸಂದರ್ಶನದಲ್ಲಿ ಆಯ್ಕೆಯಾದ ಅಂಕಲಿಯ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯ ವಿದ್ಯಾರ್ಥಿಗಳು. ಶಿಕ್ಷಕರೊಂದಿಗೆ.
Published on
ಮಾಂಜರಿ: ಅಂಕಲಿಯ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯದ ಅಂತಿಮ ವರ್ಷದ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಟಾಟಾ ಮತ್ತು ವಿವಿಧ ಪ್ರತಿಷ್ಠಿತ ಕಂಪನಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದವು. ಅಂತಿಮ ವರ್ಷದ ಎಲ್ಲ ಏಳು ವಿದ್ಯಾರ್ಥಿಗಳು ಆಯ್ಕೆಯಾಗುವುದರ ಮೂಲಕ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯ ಶೇ.100ರಷ್ಟು ಪ್ಲೇಸ್‌ಮೆಂಟ್ ಸಾಧನೆ ಮಾಡಿದೆ. ಅಂಕಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೆಎಲ್‌ಇ ಬಿಸಿಎ ಮಹಾವಿದ್ಯಾಲಯ ಈ ಮೂಲಕ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net