ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ 6ನೇ ಸ್ಥಾನ

ಡಾ.ವಿಶಾಖ ಹೆಗಡೆ
ಡಾ.ವಿಶಾಖ ಹೆಗಡೆ
Published on
ಬೆಳಗಾವಿ: ಇಲ್ಲಿನ ಜೆಎನ್‌ಎಂಸಿ ಹಾಗೂ ಕೆ.ಎಲ್.ಇ. ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಹಿರಿಯ ನಿವಾಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ವಿಶಾಖ ಹೆಗಡೆ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 6ನೇ ರ‌್ಯಾಂಕ್ ಹಾಗೂ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪದವಿ (ಚರ್ಮ, ಲೈಂಗಿಕ ಮತ್ತು ಕುಷ್ಠರೋಗ ವಿಭಾಗ) ಪರೀಕ್ಷೆಯಲ್ಲಿ ಡಾ. ವಿಶಾಖ ಹೆಗಡೆ ವಿಶ್ವವಿದ್ಯಾಲಯ ಮಟ್ಟದಲ್ಲಿ 6ನೇ ಸ್ಥಾನ ಪಡೆದು ಕೀರ್ತಿ ಗಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ಭರತನಾಟ್ಯ ಕಲಾವಿದೆಯಾಗಿದೆಯಾಗಿದ್ದು, ರಾಷ್ಟ್ರೀಯ ಮಟ್ಟದ ಬಾಲಶ್ರೀ, ಕರ್ನಾಟಕ ರಾಜ್ಯದ ಕಶ್ರೀ, ಕಲಾ ಪ್ರತಿಭೋತ್ಸವ ಸೇರಿ ಅನೇಕ ಪ್ರಶಸ್ತಿಪಡೆದುಕೊಂಡಿದ್ದಾರೆ.
ನಗರದ ನಿವಾಸಿ ಡಾ.ಜಿ.ಎಸ್.ಮಂಜುನಾಥ ಹಾಗೂ ನಿರುಪಮ ಮಂಜುನಾಥರ ಪುತ್ರಿಯಾಗಿರುವ ವಿಶಾಖ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲಾಗುವ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿವೇತನ ಹಾಗೂ ಯುವ ಕಲಾವಿದರಿಗೆ ನೀಡುವ ವಿಶೇಷ ವಿದ್ಯಾರ್ಥಿವೇತನ ಪಡೆದು ಭರತನಾಟ್ಯದಲ್ಲಿ ಉನ್ನತ ತರಬೇತಿ ಪಡೆದಿದ್ದಾರೆ. ಅಲ್ಲದೇ ಬೆಂಗಳೂರು ದೂರದರ್ಶನ ಕೇಂದ್ರದ ಶ್ರೇಣಿಯುಕ್ತ ಕಲಾವಿದೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net