6 ಕಳ್ಳರ ಬಂಧನ, 14 ದ್ವಿಚಕ್ರ ವಾಹನ ಜಪ್ತಿ

ಸಂಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್​ ಕಳ್ಳತನ ಪ್ರಕರಣ ಭೇದಿಸಿ, ಬಂಧಿತರಿಂದ ಬೈಕ್​ ವಶ ಪಡಿಸಿಕೊಂಡಿರುವ ಪೊಲೀಸರು.
ಸಂಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್​ ಕಳ್ಳತನ ಪ್ರಕರಣ ಭೇದಿಸಿ, ಬಂಧಿತರಿಂದ ಬೈಕ್​ ವಶ ಪಡಿಸಿಕೊಂಡಿರುವ ಪೊಲೀಸರು.
Published on
ಸಂಕೇಶ್ವರ: ಜಿಲ್ಲೆಯ ವಿವಿಧೆಡೆ ಬೈಕ್​ ಕಳವು ಮಾಡುತ್ತಿದ್ದ ಕಳ್ಳರ ತಂಡವನ್ನು ಪತ್ತೆ ಹಚ್ಚುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿತರಿಂದ ಒಟ್ಟು 14 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಸಂಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಎರಡು ಪ್ರತ್ಯೇಕ ಬೈಕ್​ ಕಳ್ಳತನ ಪ್ರಕರಣದ ಕುರಿತು ದಾಖಲಾದ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಸುಮಿತ ಕಮ್ಮಾರ (21), ಶಿವರಾಜ ಪಾಟೀಲ (21), ಓಂಕಾರ ಕಡಲಗಿಕರ (20), ಕಿರಣ ಕಮ್ಮಾರ (18), ಅಮಿತ ಕೋಳಿ (21), ಆನಂದ ಸ್ತಿ (38) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್​ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net