6 ಕೆ.ಜಿ. ಗಾಂಜಾ ವಶ, ಆರೋಪಿ ಬಂಧನ

ಆರೋಪಿ ಬಂಧನ
ಆರೋಪಿ ಬಂಧನ
Published on
ಬೆಳಗಾವಿ: ಮಹಾರಾಷ್ಟ್ರದಿಂದ ಗಾಂಜಾ ತಂದು ಮಾರಾಟ ಮಾಡಲು ಮುಂದಾಗಿದ್ದ ವೇಳೆ ದಾಳಿ ಮಾಡಿರುವ ನಗರ ಅಪರಾಧ ತಂಡ, ಮಹಾರಾಷ್ಟ್ರ ಮೂಲದ ಓರ್ವನನ್ನು ಬಂಧಿಸಿ 3.05 ಲಕ್ಷ ರೂ. ಮೌಲ್ಯದ 6 ಕೆ.ಜಿ. 145 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ.
ಬೀಡ ಜಿಲ್ಲೆ ಪರಳಿ ಆಜಾದ್ ನಗರದ ಸೈಯ್ಯದ್ ನಿಸಾರ್ ಇಸಾಕ್ (40) ಬಂಧಿತ. ಕಾಕತಿ ಬಳಿ ಗಾಂಜಾ ಮಾರಾಟ ಮಾಡಲು ಬಂದಿದ್ದಾಗ ಬಂಧಿಸಿದ್ದಾರೆ. ಈತ ಬೆಳಗಾವಿಯ ಗಜಾನನನಿಗೆ ಗಾಂಜಾ ಕೊಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net