ಹೌದು. ಗ್ರಾಮೀಣ ಪ್ರದೇಶಗಳ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಹಳ್ಳಿಗಳ ಸಂಪರ್ಕ ಜಾಲ ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಗತಿಪಥ’ ಯೋಜನೆಯಡಿ ಬೆಳಗಾವಿ ಗ್ರಾಮೀಣ, ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಅರಭಾಂವಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಯಮಕನಮರಡಿ, ಕುಡಚಿ,ಕಿತ್ತೂರು ಹಾಗೂ ಖಾನಾಪುರ ವಿಧಾನಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಷಗಳಿಂದ ದುರಸ್ತಿ ಇಲ್ಲದೆ ಹಾಳಾಗಿರುವ ಅಂದಾಜು 481.14 ಕಿಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಿದೆ.