ಬೆಳಗಾವಿಯಲ್ಲಿ 3 ಲಕ್ಷ ಮತದಾರರು ಅತಂತ್ರ!

 ದಾಖಲೆಗಳೊಂದಿಗೆ  ಮತದಾರರ ಪಟ್ಟ ಮ್ಯಾಪಿಂಗ್
ದಾಖಲೆಗಳೊಂದಿಗೆ ಮತದಾರರ ಪಟ್ಟ ಮ್ಯಾಪಿಂಗ್
Published on
ಬೆಳಗಾವಿ
ರಾಜ್ಯ ರಾಜಕೀಯ ಕೇಂದ್ರ ಸ್ಥಾನವಾಗಿರುವ, ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ 2.99 ಲಕ್ಷ ಮತದಾರರ ಭವಿಷ್ಯ ಅನಿಶ್ಚಿತೆಯಲ್ಲಿದೆ! ಮತ್ತೊಂದೆಡೆ ಎಸ್‌ಐಆರ್‌ಗೆ ವೇಳೆ ಮೂಲ ದಾಖಲೆ ಸಲ್ಲಿಸುವುದು ಮತದಾರರಿಗೆ ದೊಡ್ಡ ಸವಾಲಾಗಿದೆ.
ಹೌದು. ದೇಶಾದ್ಯಂತ ಚುನಾವಣೆ ಪ್ರಕ್ರಿಯೆಯ ಪಾರದರ್ಶಕತೆ, ನಕಲಿ, ಮೃತ ಮತದಾರರನ್ನು ತೆಗೆದು ಹಾಕಿ ನಿಖರತೆ, ನೈತಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗ ಆರಂಭಿಸಿರುವ ಮತದಾರರ ಪಟ್ಟ ಮ್ಯಾಪಿಂಗ್ ಕಾರ್ಯ ಜಿಲ್ಲೆಯಲ್ಲಿ ಶೇ.93ರಷ್ಟು ಪೂರ್ಣಗೊಂಡಿದೆ.ಆದರೆ, ಮತದಾರರ ಪಟ್ಟಿಯಲ್ಲಿರುವ ವಿವರಗಳು ಅಗತ್ಯ ದಾಖಲೆಗಳೊಂದಿಗೆ ಮ್ಯಾಪಿಂಗ ಆಗದ ಕಾರಣ 2,99,870 ಮತದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಲ್ಲದೆ ಈ ಮತದಾರರಲ್ಲಿ ಮೂಲದಾಖಲೆಗಳು ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಈಗಾಗಲೇ ಮತದಾರರ ಪಟ್ಟ ಮ್ಯಾಪಿಂಗ್‌ದಿಂದ ದೂರ ಉಳಿದಿರುವ ಮತದಾರರು ಜಿಲ್ಲೆಯಾದ್ಯಂತ ಜೂ.30 ರಿಂದ ಅಕ್ಟೋಬರ 7 ರವರೆಗೆ ನಡೆಯಲಿರುವ ಮತದಾರರ ಪಟ್ಟಿರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮನೆ ಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಚುನಾವಣೆ ಆಯೋಗ ನಿಗದಿ ಪಡಿಸಿರುವ 12 ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ಒಂದು ವೇಳೆ ಯಾವುದೇ ಮಾಹಿತಿ ನೀಡದಿದ್ದರೆ ಆ ಮತದಾರರನ್ನು ಗೈರು, ಮರಣ, ನಕಲು ಈ ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು. ಮತದಾರರ ಪಟ್ಟಿಯಿಂದ ಒಮ್ಮೆ ದೂರ ಉಳಿದರೆ ಮರಳಿ ಸೇರ್ಪಡೆ ಕಷ್ಟವಾಗಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
.......................
ಬಾಕ್ಸ್
ಬೆಳಗಾವಿ ಉತ್ತರ, ದಕ್ಷಿಣ ಹೆಚ್ಚು
ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 41,22,860 ಮತದಾರರಿದ್ದಾರಿದ್ದಾರೆ. ಇದರಲ್ಲಿ 2.99 ಲಕ್ಷ ಮತದಾರರ ಮಾಹಿತಿಯು ಇನ್ನೂ ದೃಢೀಕರಣ ಪ್ರಕ್ರಿಯೆಯಲ್ಲಿ ಉಳಿದಿದಿದೆ. ಮ್ಯಾಪಿಂಗ್ ಪಟ್ಟಿಯಿಂದ ಹೊರ ಉಳಿದಿರುವ ಮತದಾರರ ಪೈಕಿ ಕೆಲವರ ಬಳಿ ಜನನ ಪ್ರಮಾಣಪತ್ರ, ವಾಸಸ್ಥಳದ ದಾಖಲೆ, ಗುರುತಿನ ದಾಖಲೆ ಸೇರಿದಂತೆ ಅಗತ್ಯ ಮೂಲ ದಾಖಲೆಗಳ ಇಲ್ಲ.ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 71,293 ಮತದಾರರು, ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 42,964 ಮತದಾರರ ವಿವರಗಳು ಮ್ಯಾಪಿಂಗ್ ಆಗದೆ ಉಳಿದಿವೆ. ಮತದಾರರ ಸಂಖ್ಯೆ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಸಮಸ್ಯೆ ತೀವ್ರ ಸ್ವರೂಪ ಪಡೆದಿದ್ದು,ದಾಖಲೆಗಳ ಕೊರತೆ ಅಥವಾ ತಾಂತ್ರಿಕ ದೋಷಗಳಿಂದ ಸಾವಿರಾರು ಜನರು ಮತದಾನದ ಅವಕಾಶದಿಂದ ವಂಚಿತರಾಗುವ ಭೀತಿ ಎದುರಾಗಿದೆ.
..................
ಬಾಕ್ಸ್
ವಿದೇಶದಲ್ಲಿ ಮತದಾರರು!
ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಪಿಂಗ್ ಪಟ್ಟಿಯಿಂದ ಹೊರ ಉಳಿದಿರುವ 1.13 ಲಕ್ಷ ಮತದಾರರಲ್ಲಿ ವಿದೇಶಗಳಲ್ಲಿ ನೆಲಿಸಿದ್ದರೆ, ಕೆಲವರು ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್‌ಗಳಿಗೆ ವಲಸೆ ಹೋಗಿದ್ದಾರೆ. ಇವರ‌್ಯಾರು ತಮ್ಮ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆಸಿಕೊಂಡಿಲ್ಲ. ಇನ್ನೂ 60ಸಾವಿರಕ್ಕೂ ಅಧಿಕ ಮತದಾರರು ಬೇರೆ ಬೇರೆ ರಾಜ್ಯಗಳಿಂದ ಹಾಗೂ ವಿವಿಧ ದೇಶಗಳಿಂದ ಬಂದು ವಾಸಿಸುತ್ತಿದ್ದಾರೆ. ಇವರಿಗೆಲ್ಲಾ ಮೂಲ ದಾಖಲೆಗಳ ಸಮಸ್ಯೆದಿಂದಾಗಿ ಮತದಾರರ ಪಟ್ಟಿಯಲ್ಲಿ ಅತಂತ್ರವಾಗಿ ಉಳಿದಿದ್ದಾರೆ. ಎಸ್‌ಐಆರ್‌ದಿಂದ ಎಲ್ಲ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
................
ಬಾಕ್ಸ್
ಜಿಲ್ಲೆಯಲ್ಲಿ ಮತದಾರರ ವಿವರ
ವಿಭಾಗ ಅಂಕಿ ಸಂಖ್ಯೆ
ವಿಧಾನಸಭಾ ಕ್ಷೇತ್ರ 18
ಮತಗಟ್ಟೆ 4,525
ಪುರಷ ಮತದಾರ 20,54,273
ಮಹಿಳಾ ಮತದಾರ 20,68,395
ತೃತೀತ ಲಿಂಗ ಮತದಾರ 192
ಮ್ಯಾಪಿಂಗ್ ಮತದಾರರ 38,22,990
ಮ್ಯಾಪಿಂಗ್ ಆಗದಿರುವ ಮತದಾರ 2,99,870
...................................
ಕೋಟ್ಸ್
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮೆ ಮನೆಗೆ ಭೇಟಿ ಬಿಎಲ್‌ಒಗೆ ಸೂಕ್ತ ದಾಖಲೆ, ಮಾಹಿತಿ ಸಲ್ಲಿಸದಿದ್ದರೆ ಅಂತಹವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಮತದಾರರ ಪಟ್ಟ ಮ್ಯಾಪಿಂಗ್ ಆಗದಿರುವ ಮತದಾರರಿಗೆ ದಾಖಲೆ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುತ್ತಿದೆ.
- ಮೊಹಮ್ಮದ ರೋಷನ್ , ಜಿಲ್ಲಾಧಿಕಾರಿ
...............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net