ವಿವಿಧ ಕಂಪನಿಗಳಿಗೆ 250 ಅಭ್ಯರ್ಥಿಗಳು ಆಯ್ಕೆ

ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಬಿಸಿಎ ಮತ್ತು ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಉದ್ಯೋಗ ಆಕಾಂಕ್ಷಿಗಳು.
ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಬಿಸಿಎ ಮತ್ತು ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಉದ್ಯೋಗ ಆಕಾಂಕ್ಷಿಗಳು.
Published on
ಮಾಂಜರಿ: ಅಂಕಲಿ ಗ್ರಾಮದ ಕೆಎಲ್‌ಇ ಸಂಸ್ಥೆಯ ಬಿಸಿಎ ಮತ್ತು ಬಿಬಿಎ ಮಹಾವಿದ್ಯಾಲಯದಲ್ಲಿ ಬುಧವಾರ ಮೆಗಾ ಉದ್ಯೋಗ ಮೇಳ ಜರುಗಿತು. ಉದ್ಯೋಗ ಮೇಳದಲ್ಲಿ ಎಎಂಜಿ ಟೀಮ್ಸ್, ಡ್ಯಾಶ್ ಲಾಕ್, ಟಾಟಾ ಎಲೆಕ್ಟ್ರಾನಿಕ್ಸ್, ಇಂಡೋಮಿಮ್, ೆಕ್ಸ್ಕಾನ್, ಎಥರ್, ಒಮೆಗಾ, ಸ್ನೈಡರ್, ಶ್ಯಾಪ್ಲರ್, ಬ್ಲಿಂಕಿಟ್, ಸ್ವಿಗ್ಗಿ, ಡೆಂಜೋ, ಜೊಮ್ಯಾಟೋ, 24/7 ಎಐ ಸೇರಿದಂತೆ 15 ಕಂಪನಿಗಳು ಪಾಲ್ಗೊಂಡಿದ್ದವು. 1060 ಅಭ್ಯರ್ಥಿಗಳು ರಿಜಿಸ್ಟರ್ ಮಾಡಿದ್ದು, ಇವರಲ್ಲಿ 250ಕ್ಕೂ ಹೆಚ್ಚು ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ವಿವಿಧ ಕಂಪನಿಗಳಿಗೆ ಆಯ್ಕೆಯಾದರು. ಇನ್ನೂ ಕೆಲವು ಅಭ್ಯರ್ಥಿಗಳಿಗೆ ಕಂಪನಿಗಳಿಂದ ಕರೆ ಅಥವಾ ಇಮೇಲ್ ಮೂಲಕ ಉದ್ಯೋಗ ಪಡೆದುಕೊಳ್ಳಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಹಾವಿದ್ಯಾಲಯ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net