ರಾಮತೀರ್ಥ ನಗರದಲ್ಲಿ 20 ಗುಂಟೆ ಪರಭಾರೆ!

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿದರು. ಹನುಮಂತ ಕೊಂಗಾಲಿ, ಮುರುೇಂದ್ರಗೌಡ ಪಾಟೀಲ, ಎನ್.ಬಿ.ನಿರ್ವಾಣಿ, ಸುರೇಶ ಯಾದವ ಇತರರಿದ್ದರು.
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿದರು. ಹನುಮಂತ ಕೊಂಗಾಲಿ, ಮುರುೇಂದ್ರಗೌಡ ಪಾಟೀಲ, ಎನ್.ಬಿ.ನಿರ್ವಾಣಿ, ಸುರೇಶ ಯಾದವ ಇತರರಿದ್ದರು.
Published on
ಬೆಳಗಾವಿ: ನಗರದಲ್ಲಿ ಸಾರ್ವಜನಿಕಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ಪರಭಾರೆ ಮಾಡಲು ಸಹಕರಿಸಿರುವ ಬುಡಾ ಆಯುಕ್ತರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ರಾಮತೀರ್ಥ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸರ್ವೇ ನಂ. 561 ಮತ್ತು 562 ಸಿಎ ನಿವೇಶನದಲ್ಲಿ ಎಸ್‌ಟಿಪಿ ಪ್ಲಾಂಟ್ ಸ್ಥಾಪನೆಗೆ 20 ಗುಂಟೆ ಮೀಸಲಿಡಲಾಗಿತ್ತು. ಆದರೆ, ಅಲ್ಪಸಂಖ್ಯಾತ ಇಲಾಖೆ ವಸತಿ ನಿಲಯ ನಿರ್ಮಾಣಕ್ಕೆ ಅದು ಪರಭಾರೆಯಾಗಿತ್ತು.
ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಆ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಕ್ರಮವಹಿಸಿದ್ದರು. ಈ ಕುರಿತು ದೂರು ನೀಡಿದ್ದರೂ ಬುಡಾ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಇದೇ ರೀತಿಯ ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡಿರುವುದು ಕೂಡ ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕೆಲ ಅಧಿಕಾರಿಗಳೇ ಜಾಗೆ ಪರಭಾರೆಗೆ ಸಹಕರಿಸಿದ್ದು, ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಜರುಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಉಪಮೇಯರ್ ಹನುಮಂತ ಕೊಂಗಾಲಿ, ಬಿಜೆಪಿ ಮುಖಂಡ ಮುರುೇಂದ್ರಗೌಡ ಪಾಟೀಲ, ಮಾಜಿ ಮೇಯರ್ ಎನ್.ಬಿ.ನಿರ್ವಾಣಿ, ಸುರೇಶ ಯಾದವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net