ಒಂದೇ ದಿನದಲ್ಲಿ 2 ಲಕ್ಷ ಲೀ. ಇಂಧನ ಮಾರಾಟ!

ಪೆಟ್ರೋಲ್, ಡೀಸೆಲ್ ಖಾಲಿಯಾಗಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿಗೆ ಬೆಚ್ಚಿಬಿದ್ದ ವಾಹನ ಸವಾರರು ಬೆಳಗಾವಿ ನಗರದಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ದಾರೆ.
ಪೆಟ್ರೋಲ್, ಡೀಸೆಲ್ ಖಾಲಿಯಾಗಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿಗೆ ಬೆಚ್ಚಿಬಿದ್ದ ವಾಹನ ಸವಾರರು ಬೆಳಗಾವಿ ನಗರದಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ದಾರೆ.
Published on
ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾಗಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿಗೆ ಬೆಚ್ಚಿಬಿದ್ದ ವಾಹನ ಸವಾರರು ನಗರದಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ದಾರೆ.
ಎರಡು ದಿನದಿಂದ ಬೆಳಗ್ಗೆ 4ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೈಕ್ ಸವಾರರು, ಕಾರು ಮಾಲೀಕರು, ಖಾಸಗಿ ಬಸ್, ಶಾಲಾ-ಕಾಲೇಜು ಬಸ್‌ಗಳು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಕ್ಯಾನ್, ಬಾಟಲಿಗಳಲ್ಲಿ 50ರಿಂದ 100 ಲೀಟರ್‌ವರೆಗೆ ಖರೀದಿಸಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಪರಿಣಾಮ 24 ಗಂಟೆಯಲ್ಲಿ 2 ಲಕ್ಷ ಲೀ. ಪೆಟ್ರೋಲ್ ಮಾರಾಟವಾಗಿದೆ. ಇದರಿಂದ ನಗರದಲ್ಲಿನ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾಗಿ ಸಮಸ್ಯೆ ಉದ್ಭವಿಸಿದೆ.
ನಗರದಲ್ಲಿ ವಿವಿಧ ಕಂಪನಿಯ 50 ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುತ್ತಿದ್ದು, 20ಕ್ಕೂ ಅಧಿಕ ಬಂಕ್‌ಗಳು ಮಂಗಳವಾರ ಬೆಳಗ್ಗೆಯಿಂದಲೇ ಡೀಸೆಲ್, ಪೆಟ್ರೋಲ್ ಖಾಲಿಯಾಗಿ ಬಂದ್ ಆಗಿವೆ. ಇದರಿಂದ ಮತ್ತಷ್ಟು ಆತಂಕಗೊಂಡಿರುವ ಸವಾರರು ಇಂಧನ ಲಭ್ಯವಿರುವ ಬಂಕ್‌ಗಳಿಗೆ ಮುಗಿಬಿದಿದ್ದಾರೆ. ಗ್ರಾಮೀಣ ಭಾಗ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಂಕ್‌ಗಳಲ್ಲಿ ಇಂಧನ ಕೊರತೆ ಕಂಡುಬಂದಿಲ್ಲ.
--------
ಕೋಟ್...
ಬೆಳಗಾವಿ ನಗರದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ. ಒಂದು ತಿಂಗಳವರೆಗೆ ಸಾಕಾಗುವಷ್ಟು ಸಂಗ್ರಹವಿದೆ. ವದಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕ್ಯಾನ್, ಬಾಟಲ್‌ನಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net