ತಾಲೂಕಿನ ಕಂಗ್ರಾಳಿಕೆ.ಎಚ್ ಗ್ರಾಮದ ರಜತ ಶಿವಣಗೇಕರ (29), ಬೈಲಹೊಂಗಲ ತಾಲೂಕಿನ ಶಿಗಿಹಳ್ಳಿ ಗ್ರಾಮದ ವಿಠ್ಠಲ ಆರೇರ (38), ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಲಕರ್ಣಿ (48) ಬಂಧಿತರು. ಕಳೆದ ಎರಡು ವರ್ಷಗಳಿಂದೆ ನಗರದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನ ಕುರಿತು ಪ್ರಕರಣ ದಾಖಲಾಗಿದ್ದವು. ಈ ಪ್ರಕರಣದ ಅಡಿ ಸಿಸಿಬಿ ಪಿಐ ನಂದೀಶ್ವರ ಕುಂಬಾರ,ಎಪಿಎಂಸಿ ಪಿಐ ಯು.ಎಸ್. ಅವಟಿ ನೇತೃತ್ವದಲ್ಲಿ ರಚನೆ ಮಾಡಿದ್ದ ಅಪರಾಧ ಪತ್ತೆ ವಿಶೇಷ ತಂಡವು ಕಾರ್ಯಚರಣೆ ನಡೆಸಿ ಬೈಕ್ ಕಳ್ಳರನ್ನು ಬಂಧಿಸಿ ಅವರ ಬಳಿಯಿದ್ದ ಹೊಂಡಾ ಆಕ್ಟಿವಾ-2, ಹಿರೋ ಸ್ಪ್ಲೆಂಡರ್ ಮೋಟಾರ್-13, ಬಜಾಜ ಪ್ಲಾಟಿನಾ ಬೈಕ್-1, ಹಿರೋ ಎಚ್‌ಎಫ್ ಡಿಲೆಕ್ಸ್-2 ಸೇರಿ ಒಟ್ಟು 18 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.