ಪ್ರತ್ಯೇಕ ಪ್ರಕರಣದಡಿ 16 ಕೆಜಿ ಗಾಂಜಾ ವಶ

ಬಿ.ಎಸ್​.ತಳವಾರ
ಬಿ.ಎಸ್​.ತಳವಾರ
Published on
ನಿಪ್ಪಾಣಿ: ನಗರದಲ್ಲಿ ಡಿಸೆಂಬರ್​ ತಿಂಗಳಲ್ಲಿ ಪ್ರತ್ಯೇಕ ಪ್ರಕರಣದಡಿ 16 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಸಿಪಿಐ ಬಿ.ಎಸ್​.ತಳವಾರ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಪ್ರಕರಣದಲ್ಲಿ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಇಸಾಕ್​ ಮೌಲಾ ಮದರ್ಖಾನ್​ (20), ಬಸವರಾಜ ಪರಶುರಾಮ ಭಜಂತ್ರಿ (20) ಅವರಿಂದ 5.30 ಲ ರೂ. ಮೊತ್ತದ 10.610 ಕೆಜಿ ಗಾಂಜಾ ಮತ್ತು ಬೈಕ್​ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅದೇ ಗ್ರಾಮಾದ ದೀಪಕರಾವಸಾಬ್​ ನಾಯಕ ಎಂಬಾತನಿಂದ 2.77 ಲ ರೂ. ಮೊತ್ತದ 5.540 ಕೆಜಿ ಗಾಂಜಾ ವಶಪಡಿಸಿಕೊಂಡು ಶಹರ ಪೊಲೀಸ್​ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
&&&&&&&&&&&&&&
7ಎನ್​ಪಿಎನ್​1
ಬಿ.ಎಸ್​.ತಳವಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net