ಅಥಣಿ ಉಪವಿಭಾಗದ ಅಥಣಿ, ಐಗಳಿ, ಕಾಗವಾಡ, ಹಾರೂಗೇರಿ, ಕುಡಚಿ, ರಾಯಬಾಗ ಸಿಇಎನ್ ಅಪರಾಧ ಠಾಣೆಗಳಲ್ಲಿ 917 ಮೊಬೈಲ್ ಕಳವಾದ ಮತ್ತು ಕಳೆದುಹೋದ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಪತ್ತೆಯಾದ 460 ಮೊಬೈಲ್ ಪೋನ್‌ಗಳ ಪೈಕಿ 260 ಮೊಬೈಲ್ ವಶಪಡಿಸಕೊಳ್ಳಲಾಗಿದೆ. ಹಂತ ಹಂತವಾಗಿ ಠಾಣಾ ಮಟ್ಟದಲ್ಲಿಯೇ ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ. ಶುಕ್ರವಾರ 110 ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.