ಹಂದಿಗುಂದ: ಗ್ರಾಮದ ಎಂಎಚ್‌ಎಂ ದಿವಾಕರ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ. ಮಹಮ್ಮದ್‌ರೆಹಾನ್ ನದ್ಾ ಶೇ.96.08, ಪ್ರಜ್ವಲ ಕರಿಗಾರ ಶೇ.94.56, ಧರೆಪ್ಪ ಬಿರಾಜ ಶೇ.93.6, ರುಕ್ಮವ್ವ ದೇವರವರ ಶೇ.91.68, ದೀಪಾ ಹೊಸಾಲಿ ಶೇ.90.24 ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ. 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆ ಅಧ್ಯಕ್ಷ ಪ್ರಭಾಕರ ದಿವಾಕರ, ಮುಖ್ಯಶಿಕ್ಷಕ ಡಿ.ಎಂ.ಬ್ಯಾಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.