ಬೆಳಗಾವಿ ಮಹಾಲೇನಹಟ್ಟಿ ಗ್ರಾಮದಲ್ಲಿ ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಭಾನುವಾರ ಸಸಿ ನೆಡುವ ಅಭಿಯಾನ ಜರುಗಿತು. ರವೀಂದ್ರ ಶೆಣೈ, ವಿಜಯಾ ಶೆಣೈ, ಸೋನಲ ಸೌದಾಗರ, ಮಂಜುನಾಥ ಸುತಾರ, ಶಿರೀಷ್ ದೇಶಪಾಂಡೆ, ರಾಹುಲ ಚವ್ಹಾಣ ಇದ್ದಾರೆ.
Published on:
Copied
Follow Us
ಬೆಳಗಾವಿ: ಗ್ರೀನ್ ಸೇವಿಯರ್ಸ್ ಅಸೋಸಿಯೇಷನ್‌ನ 500ನೇ ಸಸಿ ನೆಡುವ ಅಭಿಯಾನ ತಾಲೂಕಿನ ಮಹಾಲೇನಹಟ್ಟಿ ಗ್ರಾಮದಲ್ಲಿ ಭಾನುವಾರ ಜರುಗಿತು.
ಅಭಿಯಾನದಲ್ಲಿ ಕೆಎಲ್ಇ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್, ಕೆಎಲ್ಇ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯ ಮತ್ತು ಲಿಂಗರಾಜ ಕ್ಯಾಂಪಸ್‌ದಲ್ಲಿನ ಕೆಎಲ್ಇ ಸ್ಕೂಲ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದರು.
ಸ್ಥಾಪಕ ಚೇರ್ಮನ್ ಸಮೀರ ಮಜಲಿ ಮಾತನಾಡಿ, 2016ರ ಏಪ್ರಿಲ್‌ನಿಂದ ಸಸಿ ನೆಟ್ಟು ನಿರ್ವಹಿಸುವ ಅಭಿಯಾನದಡಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದು, ಸ್ಥಳೀಯ ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸಮೂಹ ಮೂಲಕ ಬೆಳಗಾವಿ ಜಿಲ್ಲಾದ್ಯಂತ 60,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನಿರ್ವಹಿಸುತ್ತಿದ್ದೇವೆ. ವಿವಿಧ ಶಾಲೆ, ಕಾಲೇಜು ಮತ್ತು ಕಂಪನಿಗಳಲ್ಲಿ ಗ್ರೀನ್ ಟಾಕ್ಸ್ ಎಂಬ 158 ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಬೆಳಗಾವಿಯ 8 ಶಾಲೆಗಳಲ್ಲಿ ಪರಿಸರ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಅರಣ್ಯೀಕರಣ ಕೇಂದ್ರೀಕರಿಸಿ ಕಾರ್ಯ ಮಾಡಲಿದೆ ಎಂದರು.