ಅಥಣಿ: ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿನ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ಕೋರ್ಟಿಗೆ ಬಂದಿದ್ದ ಮಹಾರಾಷ್ಟ್ರ ಪುಣೆ ಮೂಲದ ಮಹಿಳೆ ಮೀನಾಕ್ಷಿ ರಾಮಚಂದ್ರ ಶಿಂಧೆ (45) ಎಂಬುವವರ ಮೇಲೆ ಮಂಗಳವಾರ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಮಹಿಳೆಯ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೆ ಯತ್ನಿಸಿದ ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮದ ಆರೋಪಿ ಬಂಡು ಶಿವಾಜಿ ಚವ್ಹಾಣ (32) ಎಂಬಾತನನ್ನು ಅಥಣಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಮಲಾಬಾಯಿ ಪವಾರ ಹಾಗೂ ಮಹೇಶ ಶಿಂಧೆ ಎಂಬುವವರ ಜಮೀನು ವಿಚಾರವಾಗಿ ದಾವೆ
ಕಲಾಪದ ವೇಳೆ ಈ ಘಟನೆ ನಡೆದಿದೆ.
ತನಿಖೆಯ ನಂತರ ಕೊಲೆ ಯತ್ನಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬರಬೇಕಿದೆ.