ನಗರದ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜು ಮೈದಾನದಿಂದ ಅಂಗಡಿ ಕಾಲೇಜ್‌ವರೆಗೆ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌ಗೆ ಮರಾಠ ಲಘು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭಿಮಾಶಂಕರ ಗುಳೇದ, ರೋಟರಿ ಕ್ಲಬ್ ಆಫ್ ವೇಣುಗ್ರಾಮ ಅಧ್ಯಕ್ಷ ಶಶಿಕಾಂತ ನಾಯ್ಕ, ವೆಂಕಟೇಶ ಪಾಟೀಲ, ಅಕ್ಷಯ ಕುಲಕರ್ಣಿ, ವೆಂಕಟೇಶ ದೇಶಪಾಂಡೆ, ಆನಂದ ಸರ್ಾ, ಉದಯ ಜೋಶಿ, ವಿಲಾಸ ಬದಾಮಿ, ರಾಜೇಶ ತಲೆಗಾಂವ ಇತರರಿದ್ದರು.