

ಬೆಳಗಾವಿ: ಕುಂದಾ ನಗರಿ ಬೆಳಗಾವಿ ರಾಜಕೀಯಕ್ಕೆ ಹೊಸ ರಾಜಕೀಯ ಕುಡಿ ಎಂಟ್ರಿಯಾಗಿದೆ. ದಿವಂಗತ ಸುರೇಶ್ ಅಂಗಡಿ ಉತ್ತರಾಧಿಕಾರಿಯಾಗಿ ಶ್ರದ್ಧಾ ಶೆಟ್ಟರ್ ಹೆಸರು ಫೈನಲ್ ಆಗಿದೆ.
ಶ್ರದ್ಧಾ ಶೆಟ್ಟರ್ ಅವರನ್ನೇ ರಾಜಕೀಯ ಅಖಾಡಕ್ಕಿಳಿಸಲು ಕುಟುಂಬ ತೀರ್ಮಾನ ಮಾಡಿದೆ. ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ, ಹಿರಿಯ ಪುತ್ರಿ ಸ್ಪೂರ್ತಿ ಅಂಗಡಿ ರಾಜಕೀಯ ಪ್ರವೇಶದ ಬಗ್ಗೆ ನಿರಾಶಕ್ತಿ ಹೊಂದಿರುವುದರಿಂದ ಶ್ರದ್ಧಾ ಶೆಟ್ಟರ್ಗೆ ಟಿಕೆಟ್ ನೀಡುವಂತೆ ಕುಟುಂಬಸ್ಥರಿಂದ ವರಿಷ್ಠರಿಗೆ ಮನವಿ ಮಾಡಲಾಗಿದೆ.
ಇದೇ ಕಾರಣದಿಂದ ಕಳೆದ ಒಂದು ತಿಂಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶ್ರದ್ಧಾ ಶೆಟ್ಟರ್ ತುಂಬಾ ಸಕ್ರಿಯರಾಗಿದ್ದಾರೆ. ಬಿಜೆಪಿ ಮುಖಂಡರು, ಕಾರ್ಯಕರ್ತರ ಭೇಟಿ, ಬಿಜೆಪಿ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ನಿನ್ನೆ ಗ್ರಾಮೀಣ ಮತಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಗ್ರಾಮಸ್ಥರ ಭೇಟಿ ಮಾಡಿ ಮಾತನಾಡಿದ್ದಾರೆ.
ಶ್ರದ್ಧಾ ಶೆಟ್ಟರ್ ಸುರೇಶ್ ಅಂಗಡಿ ಮಗಳು ಮಾತ್ರವಲ್ಲದೆ, ಜಗದೀಶ್ ಶೆಟ್ಟರ್ ಸೊಸೆಯು ಹೌದು. ಹೀಗಾಗಿ ಸೊಸೆಗೆ ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ಟಿಕೆಟ್ ಕೊಡಿಸಲು ಸಚಿವ ಜಗದೀಶ್ ಶೆಟ್ಟರ್ ತೀವ್ರ ಲಾಬಿ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ಜೊತೆಗೆ ಜಿಲ್ಲಾ ಉಸ್ತುವಾರಿ ರಮೇಶ್ ಜಾರಕಿಹೋಳಿ ಕೂಡಾ ಶ್ರದ್ಧಾಗೆ ಟಿಕೇಟ್ ಕೊಡಿಸಲು ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಶೃದ್ದಾ ಶೆಟ್ಟರ್ ರಾಜಕೀಯ ಎಂಟ್ರಿ ಬಹುತೇಕ ಫೈನಲ್ ಆಗಿದ್ದು, ರಾಜಕೀಯ ಚಟುವಟಿಕೆಯಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್)