ಬಿರುಸಿನ ಮಳೆಗೆ ಬೇಕಲ ಕೋಟೆ ಪಾರ್ಶ್ವ ಕುಸಿತ

New Project (13)
Published on

ಕಾಸರಗೋಡು: ಬಿರುಸಿನ ಮಳೆಗೆ ಇತಿಹಾಸ ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರ ಬೇಕಲಕೋಟೆಯ ಐದನೇ ಸಂಖ್ಯೆ ಪ್ರವೇಶ ದ್ವಾರದ ಸಮುದ್ರ ಭಾಗಕ್ಕಿರುವ ಕೋಟೆಯ ಒಂದು ಭಾಗ ಕುಸಿದು ಹಾನಿಗೀಡಾಗಿದೆ.

ಕುಸಿತಕ್ಕೀಡಾದ ಜಾಗದಿಂದ ಅನತಿ ದೂರದಲ್ಲಿ ಕಳೆದ ವರ್ಷ ಕೆಂಪುಕಲ್ಲಿನ ಕಾಲ್ನಡಿಗೆ ಹಾದಿ ನಿರ್ಮಿಸಲಾಗಿದ್ದು, ಈ ಹಾದಿಯೂ ಕುಸಿಯುವ ಭೀತಿ ಎದುರಾಗಿದೆ. ಕೋಟೆಯ ಒಂದು ಪಾರ್ಶ್ವ ಕುಸಿತಕ್ಕೀಡಾಗಿರುವ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net