

ಕಾಸರಗೋಡು: ಪಯ್ಯನ್ನೂರು ಕೇಳೋತ್‌ನಲ್ಲಿ ಮನೆ ಎದುರು ನಿಂತಿದ್ದ ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿ, ಚೆನ್ನಡ್ಕ ನಿವಾಸಿ ಇಬ್ರಾಹಿಂ ಖಲೀಲ್ ಎಂಬಾತನನ್ನು ಪಯ್ಯನ್ನೂರು ಠಾಣೆ ಪೊಲೀಸರು ಬದಿಯಡ್ಕದಲ್ಲಿ ಬಂಧಿಸಿದ್ದಾರೆ. ಜೂನ್ 6ರಂದು ವೃದ್ಧೆಯ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ದೃಶ್ಯ ಸನಿಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಆರೋಪಿಯ ಮೊಬೈಲ್ ಕಾಲ್ ಸಂಭಾಷಣೆ ಆಧರಿಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಆರೋಪಿ ವಿರುದ್ಧ ಹೊಸದುರ್ಗ, ಮೇಲ್ಪರಂಬ, ವಿದ್ಯಾನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸರ ಕಸಿದ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.