ಕೃಷಿಕರಿಗೆ ಜೇನುಕೃಷಿ ಉತ್ತಮ ಉದ್ಯಮ

Kin_jenu
Published on

ಕಿನ್ನಿಗೋಳಿ: ಜೇನು ಕೃಷಿ ಮಾಡಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಜೇನು ಕೃಷಿ ಎಂಬುವುದು ಒಂದು ಉತ್ತಮ ಉದ್ಯಮ ಎಂದು ಬ್ರಹ್ಮಾವರ ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ರೇವಣ್ಣನವರ್​ ಹೇಳಿದರು.

ಕಿನ್ನಿಗೋಳಿ ಕೋಸ್ಟಲ್​ ಹನಿ ಬೀ ಫಾರ್ಮ್​​​ನಲ್ಲಿ ಇತ್ತೀಚೆಗೆ ನಡೆದ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೋಟಗಾರಿಕಾ ಉಪನಿರ್ದೇಶಕ ಮಂಜುನಾಥ್​, ತೋಟಗಾರಿಕಾ ಅಧಿಕಾರಿಗಳಾದ ಯುಗೇಂದ್ರ, ದರ್ಶನ್​, ಮೂಲ್ಕಿ ಪತ್ರಕರ್ತರ ಸಂದ ಅಧ್ಯಕ್ಷ ನಿಶಾಂತ್​ ಕಿಲೆಂಜೂರು ಮತ್ತಿತರರಿದ್ದರು. ಕೋಸ್ಟಲ್​ ಬಿ ಫಾರ್ಮ್​​​ನ ಪ್ರಜ್ವಲ್​, ರೈತ ಜನ್ಯ ಕಂಪನಿ ಸಿಇಒ ಸಂದೀಪ್​ ಪೂಜಾರಿ ಜೇನು ಕೃಷಿ ಬಗ್ಗೆ ಮಾಹಿತಿ ನೀಡಿದರು.

3,375 ರೂ. ಸಹಾಯಧನ

ಒಂದು ಜೇನು ಪೆಟ್ಟಿಗೆಗೆ ಜೇನು ಕುಟುಂಬ ಸಮೇತ 4,500 ರೂ. ಖರ್ಚು ಇದ್ದು, ಜಿಲ್ಲಾ ಪಂಚಾಯಿತಿ ಯೋಜನೆಯಡಿ ಜೇನು ಕೃಷಿಗಾಗಿ ಒಂದು ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬಕ್ಕಾಗಿ 3,375 ರೂ. ಸಹಾಯಧನ ಸಿಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net