

ಕಾಸರಗೋಡು: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ 'ಬೆಡಿ ಉತ್ಸವ' ಅಂಗವಾಗಿ ಸುಡುಮದ್ದು ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ಸವ ಸಮಿತಿ ಪದಾಧಿಕಾರಿಗಳ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೆ.ಸದಾನಂದ ಕಾಮತ್, ಮಧುಸೂದನ ಕಾಮತ್, ಲಕ್ಷ$್ಮಣ ಪ್ರಭು, ಸುಧಾಕರ ಕಾಮತ್ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.
ಜಿಲ್ಲಾ ಫೋರೆನ್ಸಿಕ್ ಸಯನ್ಸ್ ಲ್ಯಾಬರಾಟರಿಯ ಪಶ್ಚಿಮ ಭಾಗದಲ್ಲಿರುವ ಖಾಲಿ ಜಾಗದಲ್ಲಿ ದೇವಸ್ಥಾನ ಉತ್ಸವ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ, ಅಪಾಯಕಾರಿ ಸ್ಥಿತಿಯಲ್ಲಿ ಪಟಾಕಿ ಸಿಡಿಸಿರುವ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಉತ್ಸವ ಸಂದರ್ಭ ಆಚಾರಾನುಷ್ಠಾನ ಪ್ರಕಾರ ದೇವಾಲಯಗಳಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಜಾರಿಯಲ್ಲಿದ್ದು, ಕೆಲವೊಂದು ದುರಂತಗಳು ನಡೆದಿರುವ ಹಿನ್ನೆಲೆಯಲ್ಲಿ ಸಂಪ್ರದಾಯಕ್ಕೂ ಮಾನ್ಯತೆ ನೀಡದೆ ಸುಡುಮದ್ದು ಪ್ರದರ್ಶನವನ್ನು ಕೈಬಿಡುವಂತೆ ಸರ್ಕಾರ ಹೇಳುತ್ತಿದೆ.