

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಉದ್ಯೋಗಿಯಾಗುವುದಕ್ಕಿಂತ ಉದ್ಯೋಗ ಕೊಡುವ ಉದ್ಯಮಿಯಾಗಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.
ನಗರದ ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲೇಜಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿ ಒಳ್ಳೆಯ ಶಿP್ಷÀಣ ನೀಡಲಾಗುತ್ತಿದೆ. ಎಲ್ಲರೂ ಕಂಪ್ಯೂಟರ್ ಇಂಜಿನಿಯರಿAಗ್ ಸೀಟು ಕೇಳಿದರೆ ಸಿಗಲು ಸಾಧ್ಯವಿಲ್ಲ. ಸೆರಾಮಿಕ್ ಮತ್ತು ಸಿಮೆಂಟ್ ಟೆಕ್ನಾಲಜಿ ಸೇರಿ ಶೇ.೧೦೦ ಉದ್ಯೋಗ ದೊರೆಯುವ ವಿಭಾಗಗಳಿವೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿAಗ್ ಕೋರ್ಸ್ ಮಾಡಿದರೂ ಉಜ್ವಲ ಭವಿಷ್ಯವಿದೆ. ಅರ್ಹತೆ, ಆಸಕ್ತಿಗೆ ತಕ್ಕಂತೆ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಸAಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ ಜಗನ್ನಾಥ್ ಬಿಜಾಪುರ, ಆಡಳಿತ ಮಂಡಳಿ ಸದಸ್ಯ ಬಸವರಾಜ ಖಂಡೇರಾವ್ ಮಾತನಾಡಿದರು. ಪ್ರಾಚಾರ್ಯ ಡಾ. ಶಶಿಕಾಂತ ಮೀಸೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ಜಯಪ್ರಕಾಶ ಕ್ಷೀರಸಾಗರ ವಂದಿಸಿದರು. ಡಾ.ಸುಜಾತಾ ತೆರದಾಳ್ ಕಾರ್ಯಕ್ರಮ ಕುರಿತು ವಿವರಿಸಿದರು. ಪೂರ್ವಿಕ ಹರಸೂರ್, ಪ್ರೊ. ರಾಮೇಶ್ವರಿ ಪಾಟೀಲ್ ನಿರೂಪಿಸಿದರು.
ಪ್ರಮುಖರಾದ ಡಾ.ಮಹಾದೇವಪ್ಪ ರಾಂಪುರೆ, ಸೋಮನಾಥ ನಿಗ್ಗುಡುಗಿ, ಡಾ.ಶರಣಬಸಪ್ಪ ಕಾಮರೆಡ್ಡಿ, ವಿನಯ್ ಪಾಟೀಲ್, ಡಾ.ಅನಿಲ್ ಪಟ್ಟಣ್, ಸಾಯಿನಾಥ್ ಪಾಟೀಲ್, ಡಾ.ಕೈಲಾಶ ಪಾಟೀಲ್, ಡಾ.ಭಾರತಿ ಹರಸೂರ್, ಡಾ.ಕಲ್ಪನಾ ವಾಂಜರ್‌ಖೇಡೆ, ಪ್ರೊ.ರವೀಂದ್ರ ಲಠ್ಠೆ ಇತರರು ಇದ್ದರು.