ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

Bears 27 MAY 20
Published on

ರಾಮನಗರ: ಚನ್ನಪಟ್ಟಣ ನಗರದಲ್ಲಿ ಇದೇ ಮೊದಲ ಸಲ ಕರಡಿಗಳ ದಾಳಿ ನಡೆದಿದ್ದು, ಬುಧವಾರ ಬೆಳಗ್ಗೆ ರಂಗೋಲಿ ಹಾಕುತ್ತಿದ್ದ ನಗರಸಭೆಯ ಮಾಜಿ ಸದಸ್ಯೆ ಸಾಕಮ್ಮ ಅವರ ಮೇಲೆ ದಾಳಿ ಎಸಗಿವೆ. ಗಂಭೀರ ಗಾಯಗೊಂಡಿರುವ ಅವರನ್ನು ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ನಗರದ ಡೂಮ್​ಲೈಡ್ ಸರ್ಕಲ್ ಬಳಿ ಸಾಕಮ್ಮ ಅವರ ಮನೆ ಇದ್ದು, ಮುಂಜಾನೆ 5 ಗಂಟೆಗೆ ಮನೆ ಬಾಗಿಲಿಗೆ ರಂಗೋಲಿ ಹಾಕುತ್ತಿದ್ದ ವೇಳೆ ಕರಡಿಗಳು ದಾಳಿ ನಡೆಸಿವೆ. ಕೂಡಲೇ ಸಾಕಮ್ಮ ಕಿರುಚಾಡಿದ್ದು, ಜನ ಸೇರುವ ಹೊತ್ತಿಗೆ ಕರಡಿಗಳು ಬಳಿಕ ಅಲ್ಲಿಂದ ಮುಂದೆ ಯಾವ ಕಡೆ ಹೋಗಿವೆ ಎಂಬುದು ಗೊತ್ತಾಗಿಲ್ಲ. ಸಾಕಮ್ಮ ಮುಖವನ್ನು ಸಂಪೂರ್ಣ ಘಾಸಿಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಏಳು ಕರಡಿಗಳ ಗುಂಪು ಈ ದಾಳಿ ನಡೆಸಿದ್ದು ಅವು ಬಂದಿರುವುದು ಎಲ್ಲಿಂದ ಎಂಬುದೂ ಗೊತ್ತಿಲ್ಲ. ಚನ್ನಪಟ್ಟಣ ಸುತ್ತಮುತ್ತ ದಟ್ಟಾರಣ್ಯಗಳು ಇಲ್ಲದ ಅವುಗಳ ಆಗಮನದ ಮೂಲ ಪತ್ತೆ ಕಷ್ಟವಾಗಿದೆ. ಈ ಭೀಕರ ದಾಳಿ ನಗರವಾಸಿಗಳಲ್ಲಿ ಭಯ, ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈಗ ಈ ಕರಡಿಗಳ ಸೆರೆಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net