More

    ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ಹೋರಾಟ ನಡೆಸುವ ಎಚ್ಚರಿಕೆ

    ಬೆಂಗಳೂರು: ಲಾಕ್​ಡೌನ್ ಕಾರಣಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದ ರಾಜ್ಯ ಸರ್ಕಾರ ಈವರೆಗೂ ಯಾರಿಗೂ ಪರಿಹಾರ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ಟೀಕಿಸಿರುವ ಕಾಂಗ್ರೆಸ್, ಹೋರಾಟ ನಡೆಸುವ ಸುಳಿವು ನೀಡಿದೆ.

    ಇದನ್ನೂ ಓದಿ: ಕೈ-ದಳ ಕೊಡುಕೊಳ್ಳುವಿಕೆ ಕಸರತ್ತು

    ಲಾಕ್​ಡೌನ್​ನಿಂದ ಸಮಸ್ಯೆಗೆ ಸಿಲುಕಿನ ಸಣ್ಣಪುಟ್ಟ ವೃತ್ತಿಮಾಡುವವರಿಗೆ ಪರಿಹಾರ ನೀಡಬೇಕೆಂದು ನಾನು ಹಾಗೂ ವಿರೋಧ ಪಕ್ಷದ ನಾಯಕರು ಒಟ್ಟಾಗಿ ಹೋಗಿ ಸಿಎಂಗೆ ಮನವಿ ಮಾಡಿದ್ದೆವು. ಅವರು ಕೆಲವು ವರ್ಗವನ್ನು ಮಾತ್ರ ಆಯ್ಕೆ ಮಾಡಿ 5 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಆದರೆ, ಈವರೆಗೂ ಬಿಡುಗಡೆ ಮಾಡಿಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಇದನ್ನೂ ಓದಿ: ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ

    ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಈವರೆಗೂ ಒಬ್ಬನಿಗೂ ನ್ಯಾಯ ಕೊಟ್ಟಿಲ್ಲ. ಯಾರಿಗೂ ಹಣ ಬಂದಿಲ್ಲ. ಅಲ್ಲದೆ, ಅನೇಕ ಷರತ್ತು ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಪರಿಹಾರ ಹಣ ಕೊಡಲು ಕಮಿಷನ್ ಕೊಡಬೇಕೆಂದು ಮಾಧ್ಯಮಗಳಲ್ಲಿ ವರದಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

    ಕ್ಯಾಬ್ ಚಾಲಕರಿಗೆ ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಆಪ್​ನಲ್ಲೇ ಅರ್ಜಿ ಹಾಕಬೇಕಂತೆ, ದಾಖಲೆ ಕೊಡಬೇಕಂತೆ, ಐದು ನಿಮಿಷಕ್ಕೆ ನಿಮಿಷಕ್ಕೆ ಚೆಕ್ ಕೊಡವುದನ್ನು ಬಿಟ್ಟು ಹಿಂಸೆ ಕೊಡುತ್ತಿದ್ದಾರೆ. ಅದೇ ರೀತಿ ಕ್ಷೌರಿಕರು ಎಲ್ಲಿರುತ್ತಾರೋ ಅಲ್ಲಿಗೇ ವಿಐ, ಆರ್​ಐಗಳು ಹೋಗಿ ಚೆಕ್ ಕೊಟ್ಟು ಬರುವುದು ಬಿಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆಂದು ದೂರಿದರು.

    ಇದನ್ನೂ ಓದಿ: ರಾಮಮಂದಿರ ಶುರು: ನಿರ್ಮಾಣ ಕಾರ್ಯಕ್ಕೆ ಅಯೋಧ್ಯೆಯಲ್ಲಿ ಚಾಲನೆ

    ಸಂಕಷ್ಟದಲ್ಲಿರುವ ಸವಿತಾ ಸಮಾಜ, ಕೃಷಿ ಕಾರ್ವಿುಕರು, ಕಮ್ಮಾರರು, ಹಮಾಲಿಗಳು, ಚಮ್ಮಾರರು, ಕುಂಬಾರರು, ಮೀನುಗಾರರು, ಬೀಡಿ ಕಟ್ಟುವವರು, ಬೀದಿಬದಿ ವ್ಯಾಪಾರಿಗಳು, ಆಟೋ-ಟ್ಯಾಕ್ಸಿ ಚಾಲಕರು ಸೇರಿ ಅನೇಕ ವೃತ್ತಿಪರ ಅಸಂಘಟಿತ ಕಾರ್ವಿುಕರಿಗೆ ತಿಂಗಳಿಗೆ 10,000 ರೂ. ಪರಿಹಾರ ಕೊಡುವಂತೆ ಆಗ್ರಹಿಸಿದರು.

    ಸತ್ತವ ಎದ್ದು ಬಂದ; ಮತ್ತೆ ಸತ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts