More

    ನಾಮಫಲಕ ವಿವಾದ ‘ಬೃಹತ್ ಹೋರಾಟದ ಎಚ್ಚರಿಕೆ’

    ಭಟ್ಕಳ: ನಾಮಫಲಕ ಅಳವಡಿಕೆ ವಿಚಾರದಲ್ಲಿ ತಾಲೂಕಿನ ಜಾಲಿಯಲ್ಲಿ ಮತ್ತೆ ಸಂಘರ್ಷ ಮುಂದುವರಿದಿದ್ದು, ಹಿಂದು ಯುವಕರು ಬೋರ್ಡ್ ಹಾಕಲು ಅಳವಡಿಸಿದ ಕಂಬವನ್ನು ಜಾಲಿ ಪಟ್ಟಣ ಪಂಚಾಯಿತಿ ತೆರವುಗೊಳಿಸಿದೆ. ಇದು ಹಿಂದು ಯುವಕರ ಆಕ್ರೋಶಕ್ಕೆ ಕಾರಣವಾಗಿ ಮತ್ತೆ ಗೊಂದಲದ ವಾತಾವರಣ ನಿರ್ವಣವಾಗಿದೆ.

    ದೇವಿನಗರಕ್ಕೆ ತೆರಳುವ ಕ್ರಾಸ್​ನಲ್ಲಿ ದೇವಿನಗರ ಎಂದು ಸಿಮೆಂಟ್​ನಿಂದ ಬರೆದ ನಾಮಫಲಕಕ್ಕೆ ಬಣ್ಣ ಬಳಿದು ಹೊಸದಾಗಿ ಹೆಸರು ಬರೆಸಿದ್ದರು. ಅದರ ಪಕ್ಕದಲ್ಲೇ ಹೊಸ ಕಂಬ ಹಾಕಿ ಅಲ್ಲಿ ಇನ್ನೊಂದು ನಾಮಫಲಕ ಅಳವಡಿಸಲು ಸಿದ್ದಪಡಿಸಿದ್ದರು. ಇದಕ್ಕೆ ಇನ್ನೊಂದು ಕೋಮಿನ ಯುವಕರು ವಿರೋಧ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದು ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು

    ಆದರೆ, ಸೋಮವಾರ ನಸುಕಿನ ಜಾವದಲ್ಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಳವಡಿಸಿದ್ದ ಕಂಬವನ್ನು ಕಿತ್ತು ಹಾಕಿತ್ತು. ಇದು ಹಿಂದು ಯುವಕರು ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದ ಇದ್ದಾಗ ಅದನ್ನು ಬಗೆಹರಿಸುವ ಬದಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಪಕ್ಕದಲ್ಲೇ ಇದ್ದ ಮದರಸಾವೊಂದು ಮಸೀದಿಯಾಗಿ ಬದಲಾಗಿದೆ. ಈ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ. ಅದಕ್ಕೆ ಯಾರು ಪರವಾನಗಿ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜ. 16ರಂದು ಮತ್ತೆ ಹಿಂದು ಸಮಾಜದ ಮುಖಂಡರ ಸಮ್ಮುಖದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ.

    ಹಿಂದು ಮುಖಂಡರ ವರ್ತನೆಗೆ ಹರಿಹಾಯ್ದ ಪಟ್ಟಣ ಪಂಚಾಯಿತಿ ಸದಸ್ಯ

    ಚುನಾವಣೆ ಬಂದಾಗ ಮಾತ್ರ ಕೇಸರಿ ಬಾವುಟ ಹಿಡಿದು ತಾನು ಭಜರಂಗಿ ಎಂದು ಬಿಂಬಿಸಿಕೊಳ್ಳುವುದಲ್ಲ. ಹಿಂದು ಸಮಾಜ ಕಷ್ಟದಲ್ಲಿದ್ದಾಗ, ತೊಂದರೆಯಾದಾಗ ಮುಖಂಡರು ತಕ್ಷಣ ಸ್ಪಂದಿಸಬೇಕು. ಬೆಳಗ್ಗೆ 9ಕ್ಕೆ ಕರೆ ಮಾಡಿದರೂ ಯಾವೊಬ್ಬ ಮುಖಂಡರು ಸರಿಯಾಗಿ ಸ್ಪಂದಿಸಿಲ್ಲ. ಅದೇ ಚುನಾವಣೆ ಸಮಯವಾಗಿದ್ದರೆ ಹೇಳುವುದಕ್ಕಿಂತ ಮೊದಲೇ ಹಾಜರಿರುತ್ತಿದ್ದರು. ಜ. 16ರಂದು ಮತ್ತೆ 9 ಗಂಟೆಗೆ ಸೇರಲು ಕರೆ ನೀಡಲಾಗಿದೆ. ಒಂದು ವೇಳೆ ನೀವು ಬರದಿದ್ದರೆ ಮುಂದೆ ನಡೆಯುವ ಘರ್ಷಣೆಗೆ ನೀವೇ ಹೊಣೆಗಾರರಾಗುತ್ತಿರಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ನಾಯ್ಕ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts