More

    ಕೈ-ದಳ ಕೊಡುಕೊಳ್ಳುವಿಕೆ ಕಸರತ್ತು

    ಬೆಂಗಳೂರು: ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕೊಡುಕೊಳ್ಳುವಿಕೆ ಬಗ್ಗೆ ಚರ್ಚೆ ಆರಂಭವಾಗಿದೆ. ಜೂನ್-ಜುಲೈನಲ್ಲಿ ಅವಧಿ ಮುಗಿಯುವ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ವಿಧಾನಸಭೆ ಸದಸ್ಯ ಬಲದ ಮೇಲೆ ಅಭ್ಯರ್ಥಿಗಳ ಗೆಲುವು ನಿರ್ಧಾರವಾಗಲಿದೆ.

    ಪ್ರಸ್ತುತ ಬಲಾಬಲದ ಪ್ರಕಾರ ರಾಜ್ಯಸಭೆಗೆ ಆಯ್ಕೆ ಆಗಬೇಕಾದ ಅಭ್ಯರ್ಥಿ 46 ಮತ ಪಡೆಯಬೇಕಾಗುತ್ತದೆ. ಈಗ ಬಿಜೆಪಿ ಸದಸ್ಯ ಬಲ ಸ್ಪೀಕರ್ ಸೇರಿ 117 ಇದ್ದು, ಮೂವರು ಪಕ್ಷೇತರರಿದ್ದಾರೆ. ಹೀಗಾಗಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸಲೀಸಾಗಿ ಗೆಲ್ಲಬಹುದಷ್ಟೇ. ಮೂರನೇ ಅಭ್ಯರ್ಥಿ ಆಯ್ಕೆ ಕಷ್ಟ. ಒಂದು ವೇಳೆ ಜೆಡಿಎಸ್ ಜತೆ ಒಮ್ಮತದ ಅಭ್ಯರ್ಥಿ ಹಾಕಿದರಷ್ಟೇ ಗೆಲ್ಲಿಸಿಕೊಂಡು ಬರುವ ಅವಕಾಶವಿದೆ. ಇತ್ತ 68 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಬಹುದು. ಹಾಗೂಹೀಗೂ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್​ಗೆ ನೀಡಿದರೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಇದರ ಹೊರತು ಬೇರೆ ಸಮೀಕರಣ ಕಾಣಿಸುತ್ತಿಲ್ಲ.

    ಇದನ್ನೂ ಓದಿ ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

    ಇದೇ ವೇಳೆ ರಾಜಕೀಯ ಪಡಸಾಲೆಯಲ್ಲಿ ಲೆಕ್ಕಾಚಾರ ಆರಂಭವಾಗಿದ್ದು, ಕಾಂಗ್ರೆಸ್-ಜೆಡಿಎಸ್ ನಡುವೆ ಅನೌಪಚಾರಿಕ ಕೊಡುಕೊಳ್ಳುವಿಕೆ ಬಗ್ಗೆ ತಂತಮ್ಮಲ್ಲೇ ಚರ್ಚೆ ನಡೆಸಿದ್ದಾರೆ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್​ನ ಹೆಚ್ಚುವರಿ ಮತ ಕೊಡಲು ಪಕ್ಷ ಸಿದ್ಧವಿದ್ದರೂ, ಜೆಡಿಎಸ್ ಮುಂದೆ ಒಂದು ಷರತ್ತು ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ. ನೀವು ಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನ ನಮಗೆ ಬಿಟ್ಟುಕೊಡುವುದಾದರೆ ಮಾತ್ರ ನಮ್ಮ ಹೆಚ್ಚುವರಿ ಮತ ನಿಮಗೆ ದಾಟಿಸುತ್ತೇವೆ ಎಂದು ಕಾಂಗ್ರೆಸ್ ವಾದ ಮಂಡಿಸಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠರು ಕೈ ಹೈಕಮಾಂಡ್ ಹಂತದಲ್ಲೇ ಮಾತುಕತೆ ಮುಗಿಸುವ ಸಾಧ್ಯತೆಯೂ ಇಲ್ಲದಿಲ್ಲ.

    ಪರಿಷತ್​ನ 7 ಸ್ಥಾನಗಳ ಪೈಕಿ 4 ಸ್ಥಾನ ಬಿಜೆಪಿ ಗೆಲ್ಲಲು ಅವಕಾಶವಿದೆ. ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಉಳಿಸಿಕೊಳ್ಳಬಹುದು. ರಾಜ್ಯಸಭೆಗೆ ಬೆಂಬಲಿಸುವ ಮೂಲಕ ಜೆಡಿಎಸ್​ನ ಒಂದು ಪರಿಷತ್ ಸ್ಥಾನ ಗಳಿಸಿಕೊಳ್ಳುವ ಆಲೋಚನೆ ಕಾಂಗ್ರೆಸ್​ನದ್ದಾಗಿದೆ. ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್​ನಿಂದ ದೇವೇಗೌಡರನ್ನು ರಾಜ್ಯಸಭೆಗೆ ಕಳಿಸುವ ಬಗ್ಗೆ ಎರಡೂ ಪಕ್ಷದಲ್ಲಿ ಮೇಲ್ನೋಟಕ್ಕೆ ತಕರಾರು ಕಾಣಿಸುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಕುಟುಂಬದ ನಡುವೆ ಇತ್ತೀಚೆಗೆ ಬಾಂಧವ್ಯ ಉತ್ತಮ ರೀತಿಯಲ್ಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

    ಭಾರತ-ಚೀನಾ ಉದ್ವಿಗ್ನತೆ: ರಕ್ಷಣಾ ಮುಖ್ಯಸ್ಥರ ಜತೆ ಪ್ರಧಾನಿ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts