More

    ಪಟ್ಟದ್ದೇವರು ದುರ್ಬಲ ವರ್ಗದ ಆಶಾಕಿರಣ

    ಭಾಲ್ಕಿ: ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಡವರು, ನಿರ್ಗತಿಕರು ಮತ್ತು ದುರ್ಬಲ ವರ್ಗದ ಪಾಲಿನ ಆಶಾಕಿರಣ ಆಗಿದ್ದಾರೆ ಎಂದು ಇಳಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಪೀಠಾಧಿಪತಿ ಶ್ರೀ ಗುರುಮಹಾಂತ ಸ್ವಾಮೀಜಿ ನುಡಿದರು.

    ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಗುರುಪ್ರಸಾದ ಪ್ರೌಢಶಾಲೆಯ ೨೦೨೩-೨೪ನೇ ಸಾಲಿನ ಸಾಧಕರ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾತಿಭೇದ ಎನ್ನದೇ ಎಲ್ಲ ವರ್ಗದ ಬಡಜನರಿಗೆ ಪೂಜ್ಯರು ಆಶ್ರಯ ನೀಡುತ್ತಿದ್ದಾರೆ. ಧರ್ಮ ಪ್ರಸಾರದ ಜತೆಗೆ ಗಡಿಯಲ್ಲಿ ವಿದ್ಯಾದೇಗುಲ ತೆರೆದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸಂಸ್ಕಾರ ಕಲ್ಪಿಸಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿರುವುದು ಮಾದರಿ ಎನಸಿದೆ. ವಿಶೇಷವಾಗಿ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದಲ್ಲಿ ಬಡ ಮಕ್ಕಳಿಗೆ ಉಚಿತ ಅನ್ನ, ಅಕ್ಷರ, ಆಶ್ರಯ ನೀಡುತ್ತಿರುವುದು ಹೆಮ್ಮೆ ತರಿಸಿದೆ ಎಂದು ಹೇಳಿದರು.

    ಹೆತ್ತವರಿಗೆ ಬೇಡವಾದ ಅನಾಥ ಮಕ್ಕಳನ್ನು ಪಾಲನೆ ಪೋಷಣೆ ಜತೆಗೆ ಶಿಕ್ಷಣ ನೀಡುತ್ತಿದ್ದಾರೆ. ಕಷ್ಟವೆಂದು ಬರುವ ಭಕ್ತರನ್ನು ಪೂಜ್ಯರು ಕಣ್ಣೀರೊರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶ್ರೀಮಠದಲ್ಲಿ ವೃದ್ಧರು, ವಿಧವೆಯರು, ಅಬಲೆಯರ ಬೇಕು ಬೇಡಗಳನ್ನು ಪೂರೈಸಿ ಅವರ ಯೋಗಕ್ಷೇಮ ವಿಚಾರಿಸುತ್ತಿರುವ ಪೂಜ್ಯರ ತಾಯಿ ಹೃದಯ ಮೆಚ್ಚುವಂತಾಗಿದೆ ಎಂದು ಬಣ್ಣಿಸಿದರು.

    ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಡಾ.ಬಸವಲಿಂಗ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶಾಲೆಯ ಮುಖ್ಯಶಿಕ್ಷಕಿ ಸವಿತಾ ಭೂರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts