ಕರಡಿ ದಾಳಿಗೊಳಗಾಗಿದ್ದ ರೈತ ಸಾವು

151
Published on

ಚಳ್ಳಕೆರೆ: ತಾಲೂಕಿನ ಓಬಳಾಪುರ ಗ್ರಾಮದಲ್ಲಿ ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಓಂಕಾರಪ್ಪ(65) ಮೃತ ದುರ್ದೈವಿ.

ಜು.29 ರಂದು ಗ್ರಾಮದ ಹೊರವಲಯದಲ್ಲಿ ಜಾನುವಾರು ಮೇಯಿಸಲು ಹೋಗಿದ್ದಾಗ ಕರಡಿ ದಾಳಿ ಮಾಡಿತ್ತು. ಎರಡೂ ಕಣ್ಣುಗಳನ್ನು ಗಾಯಗೊಳಿಸಿ ಮುಖವನ್ನು ಪರಚಿ ಗಂಭೀರ ಗಾಯಗೊಳಿಸಿತ್ತು. ಪ್ರಥಮ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹದಿನಾರು ದಿನ ಚಿಕಿತ್ಸೆ ಪಡೆದು ಬುಧವಾರ ಸಂಜೆ ಡಿಸ್ಚಾರ್ಜ್ ಮಾಡಿಕೊಂಡು ಓಬಳಾಪುರಕ್ಕೆ ಮರಳುವಾಗ ಮತ್ತೆ ಆರೋಗ್ಯ ಏರುಪೇರಾಗಿದೆ. ತಕ್ಷಣವೇ ನಗರದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ವಲಯ ಅರಣ್ಯಾಧಿಕಾರಿ ಎಸ್.ವಿ.ಮಂಜುನಾಥ, ವಿ.ವಸಂತಕುಮಾರ್ ಭೇಟಿ ನೀಡಿ ಇಲಾಖೆ ಸೌಲಭ್ಯವನ್ನು ಕುಟುಂಬಕ್ಕೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net