

ಪಡುಬಿದ್ರಿ: ಜೆಸಿಐ ಪಡುಬಿದ್ರಿ 50ನೇ ವರ್ಷಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನ.23, 24ರಂದು ಎರಡು ದಿನದ ಬೀಚ್ ಉತ್ಸವ ಕೋಸ್ಟಲ್ ಕಾರ್ನಿವಲ್ ಪಡುಬಿದ್ರಿ- 2024 ಆಯೋಜಿಸಲಾಗಿದೆ ಎಂದು ಸಂಘಟಕ ವೈ ಸುಕುಮಾರ್ ಮಾಹಿತಿ ನೀಡಿದರು.
ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ರಾಷ್ಟ್ರಮಟ್ಟದ ಹಿರಿಯ, ಕಿರಿಯ ವಿಭಾಗದ ಸಮುದ್ರದಲ್ಲಿ ಈಜು ಸ್ಪರ್ಧೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ನ.24ರಂದು ನಡೆಯಲಿದೆ. ವಿವಿಧ ರಾಜ್ಯಗಳಿಂದ 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಉಡುಪಿ ರನ್ನರ್ಸ್ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಕಡಲತೀರದಲ್ಲಿ ಬರಿಗಾಲಿನಿಂದ ಓಟ ಸಹಿತ ವಿಭಿನ್ನ, ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಯೋಜಕ ವೇಣುಗೋಪಾಲ್ ಎಸ್.ಜೆ, ಉದಯ ಕುಮಾರ್ ಶೆಟ್ಟಿ, ಸುರೇಶ್ ಪಡುಬಿದ್ರಿ, ಯಶೋದಾ ಪಡುಬಿದ್ರಿ, ಸಮಿತ್ ಎರ್ಮಾಳು, ಮಕರಂದ, ಮನು ಉದಯ ಶೆಟ್ಟಿ, ಶ್ರೀನಿವಾಸ ಶರ್ಮ, ಅಶ್ವಥ್, ಪ್ರಸನ್ನ ಸುದ್ದಿಗೋಷ್ಠಿಯಲ್ಲಿದ್ದರು.