ವಿಠಲಶೆಟ್ಟಿ ಶಾಲೆ ಇತರರಿಗೆ ಮಾದರಿ

sports
ಕುಚ್ಚೂರಿನ ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಅತಿಥೆಯ ಕುಚ್ಚೂರು ಶಾಲೆಯ ವಿದ್ಯಾರ್ಥಿಗಳು ಸತತ 18ನೇ ಬಾರಿ ಸಮಗ್ರ ಪ್ರಶಸ್ತಿ ಪಡೆದರು.
Published on

ಹೆಬ್ರಿ: ಸತತ 18ವರ್ಷದಿಂದ ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುತ್ತಿದ್ದಾರೆ. ಇದು ಇತರ ಶಾಲೆಗಳಿಗೆ ಮಾದರಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ಕುಚ್ಚೂರು ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆಯಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಉದಯ ಶೆಟ್ಟಿ ಮುನಿಯಾಲು, ಬಿ.ಕರುಣಾಕರ ಶೆಟ್ಟಿ, ರವಿಚಂದ್ರ ಕಾರಂತ್, ಪ್ರಭಾವತಿ, ಕಿರಣ್ ತೋಳಾರ್, ಸ್ನೇಹಲತಾ ಟಿ.ಜಿ, ನಿತ್ಯಾನಂದ ಶೆಟ್ಟಿ, ಸತೀಶ್ ಪೂಜಾರಿ, ಟಿ.ಜಿ ಆಚಾರ್ಯ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಇದ್ದರು. ಜಯರಾಮ ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ತುಳಸಿ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ವಿಜಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net