ಈ ಭಾಗದ ಕಥೆಗಳು ಸಿನಿಮಾಗಳಾಗಲಿ

hpt
ಹೊಸಪೇಟೆಯಲ್ಲಿ ಭಾನುವಾರ ನಟ-ನಿರ್ದೇಶ ರಾಜ್ ಬಿ.ಶೆಟ್ಟಿ ಅವರು ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
Published on

ಹೊಸಪೇಟೆ: ಯಾರು ಕೈಬಿಟ್ಟರೂ ಹೊಸಪೇಟೆ ಜನ ಕೈಬಿಡೋದಿಲ್ಲ ಎಂದು ಅಪ್ಪು ಹೇಳುತ್ತಿದ್ದರು. ಅದರಂತೆ ಟೋಬಿ ಚಿತ್ರವನ್ನೂ ಕೈಹಿಡಿಯುವಂತೆ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ ಮನವಿ ಮಾಡಿದರು.

ನಗರದಲ್ಲಿ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮಾತನಾಡಿದರು. ಅಪ್ಪು ಅವರಿಗೆ ಹೊಸಪೇಟೆ ಎಂದರೆ ಎಲ್ಲಿಲ್ಲದ ಪ್ರೀತಿ. ಇದೇ 25 ರಂದು ತೆರೆ ಕಾಣಲಿರುವ ಟೋಬಿ ಅತ್ಯುತ್ತಮ ಕಥೆಯಿದ್ದು, ವಿಶೇಷ ಸಂದೇಶ ನೀಡಲಿದೆ. ಹೊಸಪೇಟೆ-ಬಳ್ಳಾರಿಯವರೂ ಸಿನಿಮಾ ರಂಗಕ್ಕೆ ಬರಬೇಕು. ಈ ಭಾಗದ ಕಥೆಗಳು ಸಿನಿಮಾಗಳಾಗಬೇಕು ಎಂದರು.

ದೀಪಕ್ ರಾಜ್ ಶೆಟ್ಟಿ, ಗೋಪಾಲ್, ಕೃಷ್ಣ ದೇಶಪಾಂಡೆ ಮತ್ತಿತರರು ಇದ್ದರು. ಸಿನಿಮಾ ಪ್ರಚಾರಕ್ಕೆಂದು ಆಗಮಿಸಿದ ರಾಜ್ ಬಿ.ಶೆಟ್ಟಿಯನ್ನು ಸ್ಥಳೀಯ ಅಭಿಮಾನಿಗಳು ಕಾಲೇಜು ರಸ್ತೆಯಿಂದ ಪುನೀತ್ ಸರ್ಕಲ್‌ವರೆಗೆ ಬೈಕ್ ರ‌್ಯಾಲಿ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net