

ರಾಮನಗರ
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ರಾಮನಗರ ಜಿಲ್ಲೆ ಅಲಯನ್ಸ್ ಕ್ಲಬ್ ರಾಮನಗರ ಶ್ರೀವಿದ್ಯಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ವಿವಿಧ ಕೌಶಲ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಬ್ರೆಸ್ಟ್ ಕ್ಯಾನ್ಸರ್ ಮತ್ತು ಥೈರಾಯ್ಡ್ ಬಗ್ಗೆ ಉಪನ್ಯಾಸ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ಸಿ ರಾಜು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಥೈರಾಯ್ಡ್ ಸಾಂಕ್ರಾಮಿಕ ರೋಗದ ರೀತಿಯಲ್ಲಿ ಹರಡುತ್ತಿದೆ.
ಆರಂಭದಲ್ಲೇ ಇದನ್ನು ಪತ್ತೆ ಹಚ್ಚಲು ತಂತ್ರಜ್ಞಾನವಿದ್ದು, ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ರೋಗದಿಂದ ಪಾರಾಗುವಂತೆ ಸಲಹೆ ನೀಡಿದರು. ಜತೆಗೆ ಆಹಾರ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಂಡು ರೋಗಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಚಂದ್ರು ಲ್ಯಾಬ್‌ನ ಚಂದ್ರೇಗೌಡ ಮಾತನಾಡಿ, ಮಹಿಳೆಯರಿಗೆ ಯಾವ ರೀತಿ ಥೈರಾಯ್ಡ್ ಮತ್ತು ಸ್ತನ ಕ್ಯಾನ್ಸರ್ ಹರಡುತ್ತದೆ, ಅದಕ್ಕೆ ಪರಿಹಾರ, ಇದನ್ನು ತಡೆಗಟ್ಟಲು ಸ್ತ್ರೀಯರು ಅನುಸರಿಸಬೇಕಾದ ಕಾರ್ಯಕ್ರಮಗಳೇನು? ಜತೆಗೆ ಸ್ತ್ರೀಯರು ಆರೋಗ್ಯದ ಬಗ್ಗೆ ಯಾವ ರೀತಿ ಕ್ರಮ ಕೈಗೊಳ ಕೈಗೊಳ್ಳಬೇಕು ಎಂಬುದನ್ನು ತಿಳಿಸಿದರು.
ಅಲೆಯನ್ಸ್ ಕ್ಲಬ್ನ ಶೋಭಾ ಆರ್ ಗೌಡ, ಶ್ರೀ ವಿದ್ಯಾ ಸರಸ್ವತಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜು, ಸುನಿತಾ, ಅಲೆಯನ್ಸ್ ಕ್ಲಬ್‌ನ ಚಿತ್ರಾ, ಮಧುರಾ ಕುಮುದ, ಪಟೇಲ್ ಆಂಗ್ಲ ಶಾಲೆಯ ಮುಖ್ಯ ಶಿಕ್ಷಕ ಜಿ.ಆರ್. ವಿನೋದ್ ಇದ್ದರು.