

ರಾಮನಗರ: ಅಪರಿಚಿತರಿಗೆ ಎಟಿಎಂ ಕೊಡುವ ಮುನ್ನಾ ಇರಲಿ ಎಚ್ಚರ, ಇಲ್ಲವಾದರೆ ನಿಮ್ಮ ಹಣ ಸದ್ದಿಲ್ಲದೆ ವಂಚಕರ ಕೈ ಸೇರುತ್ತದೆ.
ಎಟಿಎಂನಲ್ಲಿ ಹಣ ತೆಗೆದುಕೊಡುವಾಗಿ ಹೇಳಿ ಕಾರ್ಡ್ ಬದಲಿಸಿ ವಂಚನೆ ಮಾಡಿರುವ ಘಟನೆ ಕನಕಪುರ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ತಿಗಳರಹೊಸಳ್ಳಿ ಗ್ರಾಮದ ವೆಂಕಟಗಿರಿ ಹಣ ಕಳೆದುಕೊಂಡವರು. ತಮ್ಮ ಪತ್ನಿ ಹೆಸರಿನ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಕನಕಪುರದ ಎಟಿಎಂ ಒಂದಕ್ಕೆ ಹೋಗಿದ್ದಾರೆ.
ಹಣ ಡ್ರಾ ಮಾಡಲು ಬಾರದ ಹಿನ್ನೆಲೆಯಲ್ಲಿ ಅಲ್ಲಿಯ ಇದ್ದ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಹಾಗೂ ಪಿನ್ ಕೊಟ್ಟು ಹಣ ಡ್ರಾ ಮಾಡಿಕೊಡುವಂತೆ ಕೋರಿದ್ದಾರೆ. ಈ ವೇಳೆ ಖಾತೆಯನ್ನು ಪರಿಶೀಲಿಸಿ ವಾಪಾಸ್ ಕಾರ್ಡ್ ಕೊಡುವಾಗ ಮತ್ತೊಂದು ಕಾರ್ಡ್ ಕೊಟ್ಟಿದ್ದಾನೆ. ನಂತರ ಮೂರು ವಿವಿಧ ಎಟಿಎಂನಲ್ಲಿ ತಲಾ 10 ಸಾವಿರ ರೂನಂತೆ ಒಟ್ಟು 30 ಸಾವಿರ ರೂ ಡ್ರಾ ಮಾಡಿದ್ದಾನೆ.
ನಂತರ ಕನಕಪುರದ ಹೋಟೆಲ್ ಒಂದರಲ್ಲಿ 2130 ರೂ.ಗಳ ಊಟವನ್ನು ಮಾಡಿ ಕಾರ್ಡ್ ನಲ್ಲಿಯೇ ಹಣವನ್ನು ಕೊಟ್ಟು ಹೋಗಿದ್ದಾನೆ.
ಈ ಸಂಬಂಧ ಕನಕಪುರ ಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.