ಜೀವಾಮೃತ ಸದ್ಬಳಕೆಯಾಗಲಿ

22byd1
Published on

ಬ್ಯಾಡಗಿ: ಪ್ರಾಕೃತಿಕವಾಗಿ ಲಭ್ಯವಾಗುವ ಜಲವನ್ನು ಅಗತ್ಯವಿದ್ದಷ್ಟು ಬಳಸಿಕೊಂಡು ಹೆಚ್ಚಿನ ನೀರನ್ನು ಭೂಮಿಯಲ್ಲಿ ಇಂಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.

ಬ್ಯಾಡಗಿ ತಾಪಂ ಕಾರ್ಯಾಲಯ, ವನಸಿರಿ ಸಂಸ್ಥೆ, ಸಂಘಮಿತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ತಾಪಂ ಸುವರ್ಣಸೌಧ ಕಟ್ಟಡದಲ್ಲಿ ಸೋಮವಾರ ಮಹಿಳಾ, ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ, ಬಹುತೇಕ ನೀರು ಸಮುದ್ರಕ್ಕೆ ಸೇರಲಿದೆ. ಕಟ್ಟಡ, ಹೊಲ, ಗುಡ್ಡಗಾಡಿನಲ್ಲಿ ಬೀಳುವ ನೀರನ್ನು ಶೇಖರಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ರೈತರಿಗೆ ಜಲಸಂವರ್ಧನೆ, ಒಡ್ಡು ನಿರ್ವಣ, ಬದು ಹಾಕುವುದು, ಕೆರೆಕಟ್ಟೆ ನಿರ್ವಣ, ಕೃಷಿ ಹೊಂಡ ಮತ್ತಿತರ ಯೋಜನೆ ಮೂಲಕ ಅನುಕೂಲ ಕಲ್ಪಿಸಿದೆ ಎಂದರು.

ತಾಪಂ ಇಒ ಎ.ಟಿ. ಜಯಕುಮಾರ ಮಾತನಾಡಿ, ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸರ್ಕಾರ ಸಂವಿಧಾನ ಮೂಲಕ ಮೀಸಲಾತಿ ಕಲ್ಪಿಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಮೀಸಲಾತಿ ಕಲ್ಪಿಸಿದ್ದು, ಸ್ವಪ್ರಯತ್ನದಿಂದ ಇನ್ನಷ್ಟು ಸಾಧನೆ ಮಾಡಬೇಕಿದೆ. ಮಹಿಳೆ ಸಂಸಾರದ ನೊಗ ಹೊತ್ತು, ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಮಹಿಳೆಯರ ರಕ್ಷಣೆಗಾಗಿ ಹತ್ತಾರು ಕಾಯ್ದೆಗಳಿವೆ. ಎಲ್ಲರೂ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಪುರಸಭೆ ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಂಕ್ರಯ್ಯ ಕಳಸೂರಮಠ, ಎಸ್.ಡಿ. ಬಳಿಗಾರ, ಗ್ರಾಪಂ ಸದಸ್ಯರಾದ ಶಿವಗಂಗವ್ವ ಕಾಯಕದ, ಸುನಂದಾ ಅಜ್ಜಮ್ಮನವರ, ವನಿತಾ ಓಲೇಕಾರ, ಶಶಿಕಲಾ ಚಕ್ರಸಾಲಿ, ಚೌಡವ್ವ ಗದಾರಿ, ತುಳಸಾ ಕಾಳೇರ, ಮಂಜುಳಾ ನಾಯ್ಕರ, ಬಸಪ್ಪ ಕಜ್ಜರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net