

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ (ಸೆ.3) ಚುನಾವಣೆ ನಡೆಯಲಿದೆ.
ಸಂಘದ ಹಾಲಿ ಅಧ್ಯಕ್ಷ ಎ.ಅಮೃತರಾಜ್ ನೇತೃತ್ವದ ತಂಡ ಈಗಾಗಲೇ ನಾಮಪತ್ರ ಸಲ್ಲಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನಮನೆಯಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅಂದು ಸಂಜೆಯೇ ಲಿತಾಂಶ ಹೊರಬೀಳಲಿದೆ. ಚುನಾವಣೆಯಲ್ಲಿ ಗೆದ್ದವರು ಮುಂದಿನ ಐದು ವರ್ಷವರೆಗೆ ಸಂಘದ ನಿರ್ದೇಶರಾಗಿರುತ್ತಾರೆ.
ಇದನ್ನೂ ಓದಿ:ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗುತ್ತಿದೆ
ನನ್ನ ಅವಧಿಯಲ್ಲಿ ಪಾಲಿಕೆಯ ನೌಕರರ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಈಡೇರಿಸುವ ಕೆಲಸ ಮಾಡಿದ್ದೇನೆ. ವೃಂದ ಮತ್ತು ನೇಮಕಾತಿ (ಸಿಆ್ಯಂಡ್‌ಆರ್) ನಿಯಮದಂತೆ ಅಧಿಕಾರಿಗಳಿಗೆ ಬಡ್ತಿ ಸಿಗುವಂತೆ ಮಾಡಿದ್ದೇನೆ. ನೌಕರರ ಇತರ ಸಮಸ್ಯೆಗಳನ್ನು ಈಡೇರಿಸಲು ಹೋರಾಟ ನಡೆಸಿದ್ದೇನೆ. ಕೋವಿಡ್ ವೇಳೆ ನೌಕರರ ಹಿತರಕ್ಷಣೆಗಾಗಿ ಕೆಲಸ ಮಾಡಿದ್ದೇನೆ. ಎಲ್ಲರ ಸಹಕಾರದಿಂದ ಕಾಶಿಯಲ್ಲಿ ಕನ್ನಡದ ಕಂಪು ಹಾರಿಸಲು ಕಾರ್ಯಕ್ರಮವನ್ನು ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲು ಗುರಿಹಾಕಿಕೊಂಡಿದ್ದೇನೆ ಎಂದು ಎ.ಅಮೃತರಾಜ್ ಹೇಳಿದರು.