

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಿರಿಯ ಆರೋಗ್ಯ ಅಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ದಾಸಹಳ್ಳಿ ವಲಯದ ಹಿರಿಯ ಆರೋಗ್ಯ ಅಧಿಕಾರಿ ಆಗಿರುವ ಪ್ರವೀಣ್ ಕುಮಾರ್, ನಿಸರ್ಗ ನಿಧಿ ಎಣ್ಣೆ ಗಿರಣಿ ಮಾಲೀಕನಿಂದ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಣ್ಣೆ ಗಿರಣಿ ತರೆಯಲು ದಾಸಹಳ್ಳಿ ವಲಯದ ಬಿಬಿಎಂಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರು. ಈ ವೇಳೆ ಕೆಲಸ ಮಾಡಿಕೊಡಲು ಹೆಚ್ಚು ಸಮಯ ಆಗುತ್ತೆ, ಶೀಘ್ರವಾಗಿ ಕೆಲಸ ಆಗಬೇಕು ಎಂದರೆ ಲಂಚ ನೀಡುವಂತೆ ಕೇಳಿದ್ದ ಪ್ರವೀಣ್ ಕುಮಾರ್ ಬೇಡಿಕೆ ಇಟ್ಟಿದ್ದರು. ಅದರಂತೆ ಒಮ್ಮೆ 3 ಸಾವಿರ ಹಣ ಪಡೆದಿದ್ದ ಅಧಿಕಾರಿಯು, ಒಟ್ಟು 12 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಅವರು ಉಳಿದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.