

ಕುಣಿಗಲ್: ಪೊಲೀಸ್ ಪೇದೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣ ಠಾಣೆಯ ಪೇದೆ ಯಲ್ಲಾಲಿಂಗ ಮೇಟಿ (29) ಮೃತರು. ಕುಣಿಗಲ್ ರೈಲು ನಿಲ್ದಾಣದ ಬಳಿ ಶನಿವಾರ ಈ ದುರ್ಘಟನೆ ಸಂಭವಿಸಿದೆ. ಯಲ್ಲಾಲಿಂಗ ವಿಜಯಪುರ ಜಿಲ್ಲೆಯವರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.