

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ ಪ್ರಾರಂಭಿಸುವ "ಪೇಯಿಂಗ್ ಗೆಸ್ಟ್' (ಪಿಜಿ)ಗಳಿಗೆ, ಪರವಾನಗಿ ಪಡೆದು ಈಗಾಗಲೇ ಇರುವ ಪಿಜಿಗಳಿಗೆ ಸಂಬಂಧಪಟ್ಟಂತೆ ಬಿಬಿಎಂಪಿ, ಶುಕ್ರವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಪೇಯಿಂಗ್ ಗೆಸ್ಟ್ನ ಎಲ್ಲ ಪ್ರವೇಶ,ನಿರ್ಗಮನ ದ್ವಾರದಲ್ಲಿ ಮತ್ತು ಆವರಣದ ಸುತ್ತಮುತ್ತ ಟನಾವಳಿ ಚಿತ್ರೀಕರಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ರತಿ ಸಿಸಿಟಿವಿ ಕ್ಯಾಮೆರಾ ವಿಡಿಯೊ, ಫೋಟೇಜ್ 90 ದಿನವರೆಗೆ ಹಾರ್ಡ್ವೇರ್ ಸಾಫ್ಟ್ವೇರ್ನಲ್ಲಿ ಬ್ಯಾಕಪ್ ಸ್ಟೋರೆಜ್ ರಸಬೇಕು. ವಸತಿ ಸಂಬಂಧಿತ ಕಟ್ಟಡ ನಿಯಮ ಪ್ರಕಾರ ಪಿಜಿಗಳಲ್ಲಿ ಪ್ರತಿಯೊಬ್ಬ ನಿವಾಸಿ ವಾಸಕ್ಕೆ ತಲಾ 70 ಚದರ ಅಡಿ ಕನಿಷ್ಠ ಜಾಗ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ, ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ರ್ನಿದಿಷ್ಟ ಸಂಖ್ಯೆ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡತಕ್ಕದ್ದು. ವಾಸಿಸುವ ನಿವಾಸಿಗಳಿಗೆ ಸ್ವಚ್ಛ, ನೈರ್ಮಲ್ಯತೆ ಹೊಂದಿರುವ ಸ್ನಾನಗೃಹ ಮತ್ತು ಶೌಚಗೃಹ ಸೇವೆ ಒದಗಿಸಬೇಕು ಎಂದು ಪ್ರಕಟಣೆಯಲ್ಲಿ ಬಿಬಿಎಂಪಿ ಉಲ್ಲೇಖಿಸಿದೆ.
ಪೇಯಿಂಗ್ ಗೆಸ್ಟ್ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರಬೇಕು.ಪ್ರತಿಯೊಬ್ಬ ವಾಸಿಗೆ 135 ಎಲ್ಪಿಸಿಡಿ ನೀರಿನ ಲಭ್ಯತೆ ಇರುವುದನ್ನು ಮಾಲೀಕರು, ಉದ್ದಿಮೆದಾರರು ಖಚಿತಪಡಿಸಿಕೊಳ್ಳಬೇಕು. ಉದ್ದಿಮೆದಾರರು ತಮ್ಮದೇ ಅಡುಗೆ ಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 3 ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಉದ್ದಿಮೆದಾರರು, ಮಾಲೀಕರು ಪೇಯಿಂಗ್ ಗೆಸ್ಟ್ಗಳಲ್ಲಿ ವಾಸಿಸುವ ನಿವಾಸಿಗಳ ಸುರತಾ ದೃಷ್ಟಿಯಿಂದ ಕನಿಷ್ಠ 1 ಸಿಬ್ಬಂದಿ ಕಡ್ಡಾಯವಾಗಿ 24*7 ಸೇವೆ ಅಡಿ ನಿಯೋಜಿಸಬೇಕು ಎಂದು ಬಿಬಿಎಂಪಿ ಹೇಳಿದೆ.
ಸಹಾಯವಾಣಿ ಫಲಕ ಅಳವಡಿಸಿ
ಪಿಜಿ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರತಾ ಕ್ರಮ ಆಳವಡಿಸಿರುವ ಬಗ್ಗೆ ಸಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ ಪಿಜಿ ಕಟ್ಟಡದಲ್ಲಿ ಪಾಲಿಕೆ ಸಹಾಯವಾಣಿ 1533, ಪೋಲೀಸ್ ಇಲಾಖೆ ಸಹಾಯವಾಣಿ 101 ಸಂಖ್ಯೆ ಪ್ರದರ್ಶಿಸುವ ಫಲಕ ಅಳವಡಿಸಿದ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ವಲಯ ಆರೋಗ್ಯಾಧಿಕಾರಿ,ಹಿರಿಯ ಆರೋಗ್ಯ ಪರಿವೀಕ್ಷರಿಗೆ ಪಾಲಿಕೆ ಸೂಚಿಸಿದೆ.
ಮಾರ್ಗಸೂಚಿ ಪಾಲನೆ ಪರಿಶೀಲಿಸಿ
ಪೇಯಿಂಗ್ ಗೆಸ್ಟ್ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಸಬೇಕು. ಮಾಲೀಕರು ಸಮರ್ಪಕವಾಗಿ ನತ್ಯಾಜ್ಯ ವಿಂಗಡಿಸಿ ವಿಲೇವಾರಿಗೆ ಕ್ರಮವಹಿಸಬೇಕು. ವಲಯ ಆರೊಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು, ಹಿರಿಯ ಆರೋಗ್ಯ ಪರಿವೀಕರು ತಮ್ಮ ಕಾರ್ಯೇತ್ರದ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪಾಲನೆ ಕುರಿತು ಆರು ತಿಂಗಳಿಗೊಮ್ಮೆ ಖಚಿತಪಡಿಸಿಕೊಳ್ಳಬೇಕು ಎಂದು ಬಿಬಿಎಂಪಿ ತಾಕೀತು ಮಾಡಿದೆ. ಮಾರ್ಗಸೂಚಿ ಉಲ್ಲಂಘನೆ ಮಾಡುವ ಉದ್ದಿಮೆದಾರರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆ ಅಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.