ಬೆಂಗಳೂರು: ಕರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೊನಾ ಹರಡದಂತೆ ಶೀಘ್ರವಾಗಿ ಸೋಂಕು ಪತ್ತೆಹಚ್ಚಲು ಜ್ವರ ಪ್ರಕರಣಗಳ ತಪಾಸಣಾ ನಡೆಸಲು ಬಿಬಿಎಂಪಿ ಆದೇಶಿಸಿದೆ.
ಇದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜ್ವರ ಪ್ರಕರಣಗಳ ತಪಾಸಣೆ, ಶೀಘ್ರ ಪತ್ತೆ, ರೆಫರಲ್ ಸೇವೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಅವಶ್ಯಕತೆ ಇರುವುದಾಗಿ ಬಿಬಿಎಂಪಿ ತಿಳಿಸಿದೆ.

ಕೊರನಾ ಸೋಂಕು ಬಹುಮುಖವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಬೇದಿ ಮುಖಾಂತರ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಜ್ವರ ಪ್ರಕರಣಗಳೇ ಹೆಚ್ಚಾಗಿರುವುದರಿಂದ ಶೀಘ್ರ ಪತ್ತೆ ಹಚ್ಚಲು ಎಲ್ಲಾ ಕಡೆ ಫೀವರ್ ಕ್ಲೀನಿಕ್ಗಳನ್ನು ತೆರೆಯಲು ಬಿಬಿಎಂಪಿ ಆದೇಶಿಸಿದೆ. ಇದರಂತೆ ಆಸ್ಪತ್ರೆಗಳಿಗೆ ಬರುವ ಎಲ್ಲಾ ರೋಗಿಗಳನ್ನು ಜ್ವರ ತಪಾಸಣೆಗೆ ಒಳಪಡಿಸಲು ಕ್ರಮು ಕೈಗೊಳ್ಳಲಾಗಿದೆ.
ಫೀವರ್ ಕ್ಲೀನಿಕ್ಗಳನ್ನು ಸ್ಥಾಪಿಸಿ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 4 ಗಂಟೆಯಿಂದ ಸಂಜೆ 4.3ರವರೆಗೂ ಜ್ವರ ತಪಾಸಣೆ ನಡೆಸುವುದು. ಪ್ರತ್ಯೇಕ ಜ್ವರ ತಪಾಸಣಾ ಶಿಬಿರ ತೆರೆಯುವುದು ಮತ್ತು ಆಸ್ಪತ್ರೆಗೆ ಬರುವ ರೋಗಿಗಳ ನಡುವೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ನೋಡಿಕೊಳ್ಳುವಂತೆ ಸೂಚಿಸಲಾಗಿದೆ.