ಎಲ್ಲೆಲ್ಲೂ ಕರೊನಾ ಸೋಂಕು, ಕ್ವಾರಂಟೈನ್​ದೇ ಮಾತು.. ನೀವೆಷ್ಟು ಸೇಫ್? - ನಿಮ್ಮ ಏರಿಯಾದ ಪಿನ್ ಕೋಡ್‌ ಹಾಕಿ ಚೆಕ್ ಮಾಡಿ..

Qurantain 27 March 20
Published on

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಭೀಕರತೆ ಹೆಚ್ಚಾಗುತ್ತಿದೆ. ಪುಟ್ಟ ಮಗುವಿನಿಂದ ಹಿಡಿದು, ವೃದ್ಧರವರೆಗೆ ಸೋಂಕು ತಗುಲಿತ್ತಿದೆ.

ಸರ್ಕಾರ ವಿದೇಶದಿಂದ ಬಂದವರಿಗೆಲ್ಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್​ ವಿಧಿಸಿದೆ. 14ದಿನ ಮನೆ ಬಿಟ್ಟು ಹೊರಗೆ ಬರಲೇಬೇಡಿ ಎಂದು ಆದೇಶ ನೀಡಿದೆ. ಹಾಗೇ ಯಾರಲ್ಲಾದರೂ ಕರೊನಾ ದೃಢಪಟ್ಟರೆ, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರ್ಯಾಕ್​ ಮಾಡುತ್ತಿದೆ.

ಸದ್ಯ ರಾಜ್ಯಾದ್ಯಂತ ಯಾವ ಯಾವ ಏರಿಯಾದಲ್ಲಿ ಎಷ್ಟು ಮಂದಿ ಈ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂಬುದನ್ನು https://www.quarantime.in/ ವೆಬ್​ಸೈಟ್​ ಮೂಲಕ ತಿಳಿದುಕೊಳ್ಳಬಹುದು. ಆದರೆ ಇದಕ್ಕೆ ಆಯಾ ಪ್ರದೇಶದ ಪಿನ್​ಕೋಡ್​ ಗೊತ್ತಿರಬೇಕು. ಉಳಿದ ಪ್ರದೇಶಗಳು ಬಿಡಿ ನಿಮ್ಮ ಏರಿಯಾದ ಪಿನ್​ಕೋಡ್​ ಹಾಕಿ ಪರಿಶೀಲನೆ ಮಾಡಿಕೊಳ್ಳಿ. 

https://www.quarantime.in/ ಮೇಲೆ ಕ್ಲಿಕ್​ ಮಾಡುತ್ತಿದ್ದಂತೆ, ನಿಮ್ಮ ಏರಿಯಾದ ಪಿನ್​ಕೋಡ್​ ನಮೂದಿಸಿ ಎಂದು ಬಿಳಿಬಣ್ಣದ ಬಾರ್​ ಕಾಣಿಸುತ್ತದೆ. ಅದರ ಮೇಲೆ ಪಿನ್​ಕೋಡ್ ಟೈಪ್​ ಮಾಡಿ. ಹಾಗೇ ಅದರ ಮುಂದೆ ಇರುವ ಹಸಿರು ಮಾರ್ಕ್​ ಮೇಲೆ ಕ್ಲಿಕ್​ ಮಾಡಿ. ಆಗ  ಅಲ್ಲೇ ಕೆಳಗಡೆ ನಿಮ್ಮ ಏರಿಯಾದಲ್ಲಿ ಕ್ವಾರಂಟೈನ್​ನಲ್ಲಿ ಇರುವವರ ಸಂಖ್ಯೆ ಕೆಂಪುಬಣ್ಣದಲ್ಲಿ ಗೋಚರಿಸುತ್ತದೆ.

ಮತ್ತೆ ಹೆಚ್ಚಿನ ಮಾಹಿತಿ (More Details) ಮೇಲೆ ಕ್ಲಿಕ್ ಮಾಡಿದರೆ ಕ್ವಾರಂಟೈನ್​ನಲ್ಲಿ ಇರುವವರ ಪ್ರಯಾಣದ ಹಿಸ್ಟರಿ, ಎಷ್ಟುದಿನದಿಂದ ಇದ್ದಾರೆ ಎಂಬಿತ್ಯಾದಿ ವಿವರವೂ ಗೋಚರಿಸುತ್ತದೆ.

ಕರ್ನಾಟಕದ ಸರ್ಕಾರ ಸರ್ವೇ ಮಾಡಿದಾಗ ದೊರೆತ ಸಂಖ್ಯೆಗಳನ್ನು ಆಧರಿಸಿ ಈ ಟ್ರ್ಯಾಕ್​ ವೆಬ್​ಸೈಟ್​​ ರೂಪಿಸಲಾಗಿದೆ ಎನ್ನಲಾಗಿದೆ. 

ನೀವೂ ನಿಮ್ಮ ಏರಿಯಾದ ಪಿನ್​ ಕೋಡ್​ ಹಾಕಿ..ಎಷ್ಟು ಜನರು ಇದ್ದಾರೆ ಎಂಬುದನ್ನು ನೋಡಿ. ಮುಂಜಾಗ್ರತೆ ವಹಿಸಿ. ಹಾಗೇ..ಯುವಕಮಂಡಳ, ಆಶಾಕಾರ್ಯಕರ್ತೆಯರ ಮೂಲಕ ನಿಮ್ಮ ಸುತ್ತಮುತ್ತ ಇರುವ ಜನರಿಗೂ ಜಾಗೃತಿ ಮೂಡಿಸಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net