23ರಂದು ಬಸ್ರೂರು ದೇವಳ ವರ್ಧಂತಿ ಉತ್ಸವ

basruru
ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವರು
Published on

ಗಂಗೊಳ್ಳಿ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಶ್ರೀದೇವಿಯ ಪುನಃ ಪ್ರತಿಷ್ಠಾಪನಾ 25ನೇ ವರ್ಧಂತಿ ಉತ್ಸವ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದಾನುಸಾರ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮೇ 23ರಂದು ನಡೆಯಲಿದೆ.

22ರಂದು ದೇವಳ ಪರಿಸರದ ಶ್ರೀ ನಾಗದೇವರ ಮತ್ತು ಜಟ್ಟಿಗ ದೈವದ ಪುನಃ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ ಸೇವೆ ನಡೆಯಲಿದೆ. 23ರಂದು ಶ್ರೀ ಮಹಾಲಸಾ ನಾರಾಯಣೀ ದೇವಿಯ ಪುನಃ ಪ್ರತಿಷ್ಠಾಪನಾ 25ನೇ ವರ್ಧಂತಿ ಉತ್ಸವದ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ 7ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. 10ಕ್ಕೆ ಶತಕಲಶಾಭಿಷೇಕ, ಶ್ರೀ ನಾಗದೇವರಿಗೆ ಮತ್ತು ಜಟ್ಟಿಗ ದೈವಗಳಿಗೆ ವಿಶೇಷ ಪೂಜೆ, 10.30ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಹರಕೆ ಸೀರೆಗಳ ಏಲಂ, ಮಹಾ ಮಂಗಳಾರತಿ, ದರ್ಶನ ಸೇವೆ ನಡೆಯಲಿದ್ದು, ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ, 7ರಿಂದ ರಜತ ಪಲ್ಲಕಿ ಉತ್ಸವ, ಅಷ್ಟಾವಧಾನ ಸೇವೆ, ವಸಂತ ಪೂಜೆ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net