ಬಸವೇಶ್ವರಸ್ವಾಮಿ ದೇವಾಲಯ ಉದ್ಘಾಟನೆ

ಮಲ್ಲಾಪುರ ಗ್ರಾಮದಲ್ಲಿ ಬಸವೇಶ್ವರ ದೇವಾಲಯದ ಲೋಕಾರ್ಪಣೆ
ಅರಕಲಗೂಡು ತಾಲೂಕು ಮಲ್ಲಾಪುರ ಗ್ರಾಮದಲ್ಲಿ ಬಸವೇಶ್ವರ ದೇವಾಲಯದ ಲೋಕಾರ್ಪಣೆ ಪ್ರಯುಕ್ತ ಗುರುವಾರ ಕಳಸ ಪೂಜೆ ಸಲ್ಲಿಸಲಾಯಿತು ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಅಪ್ಪಾಜಿ ಸ್ವಾಮೀಜಿ, ಶ್ರೀ ಸರ್ಪಭೂಷಣ ಸ್ವಾಮೀಜಿ, ಷಡಾಕ್ಷರ ಸ್ವಾಮೀಜಿ ಇದ್ದರು.
Published on

ಅರಕಲಗೂಡು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಪ್ರಯುಕ್ತ ಗುರುವಾರ ವಿವಿಧ ಪೂಜಾ ವಿಧಾನಗಳು ನಡೆದವು.

ಬಸವೇಶ್ವರಸ್ವಾಮಿ ನೂತನ ಶಿಲಾಮೂರ್ತಿಯ ಪುನರ್ ಪ್ರತಿಸ್ಥಾಪನೆಯ ಪ್ರಯುಕ್ತ ಬೆಳಗ್ಗೆ ಗೋದೂಳಿ ಲಗ್ನದಲ್ಲಿ ಗಂಗಾಪೂಜೆ, ಗೋಪೂಜೆ, ನೂತನ ವಿಗ್ರಹ ಸ್ಥಾಪನೆ ಜರುಗಿತು. ದಕ್ಕೂ ಮುನ್ನ ಗ್ರಾಮದ ಮುಂಭಾಗದಲ್ಲಿರುವ ದೊಡ್ಡಕೆರೆಯಲ್ಲಿ ಕಳಸ ಪ್ರತಿಸ್ಥಾಪಿಸಿ, ಪೂಜಾ ಕೈಂಕರ್ಯದ ನಂತರ ಸುಮಂಗಲಿಯರು ಕಳಸ ಹೊತ್ತು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ನೂತನ ದೇವಾಲಯಕ್ಕೆ ತಲಪಿದರು. ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ದಿಂಡಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ಸರ್ಪಭೂಷಣಸ್ವಾಮಿ, ಷಡಾಕ್ಷರಸ್ವಾಮಿ, ಪುರೋಹಿತರಾದ ಶಿವಣ್ಣ, ಸತ್ಯ ಬಂದು ಬಳಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net