ಕನ್ನಡದ ಕಂಪು ಪಸರಿಸುವ ಬಸವೇಶ್ವರ ದೇಗುಲ

kavanapura
Published on

* ದೇವಾಲಯದ ತುಂಬ ಸಾಹಿತಿಗಳು, ಕವಿಗಳು,

ನಾಡು&ನುಡಿ ಚಿತ್ರಣ ತುಂಬಿದ ಚಿತ್ತಾರ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಕನ್ನಡ ಸಾಹಿತಿಗಳು, ಕವಿಗಳು, ನಾಡು&ನುಡಿ ಚಿತ್ರಣದೊಂದಿಗೆ ಕನ್ನಡದ ಚಿತ್ತಾರ ಮೂಡಿಸಿ ಭಕ್ತಿಯ ಜತೆಗೆ ಕನ್ನಡದ ಕಂಪು ಪಸರಿಸುವ ವೈಶಿಷ್ಟ್ಯ ಕ್ಕೆ ತಾಲೂಕಿನ ಕೈಲಾಂಚ ಹೋಬಳಿಯ ಕವಣಾಪುರದ ಪ್ರಸಿದ್ಧ ಬಸಪ್ಪನ ಕ್ಷೇತ್ರ ಬಸವೇಶ್ವರ ದೇವಾಲಯ ಸಾಯಾಗಿದೆ.

ಮೊದಲ ಕಾರ್ತಿಕ ಸೋಮವಾರದಂದು ಬಸವೇಶ್ವರಸ್ವಾಮಿ ಸೇವಾ ಟ್ರಸ್ಟ್​ ಇಂತಹ ವಿನೂತನ ಕಾರ್ಯಕ್ರದ ಮೂಲಕ ಗಮನ ಸೆಳೆದಿದೆ. ಕನ್ನಡ ಉಪನ್ಯಾಸಕ ಕವಣಾಪುರ ಅರುಣ್​ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ದೇವಾಲಯ ಎಂದರೆ ದೇವರು, ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ಇರುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ, ದೇವಾಲಯದಲ್ಲೂ ಕನ್ನಡದ ಕಂಪು, ಸಾಹಿತಿ ಕವಿಗಳ ಪರಿಚಯವನ್ನು ಮಾಡಿಸಿ, ಕನ್ನಡ ಭಾಷೆಗೆ ಮತ್ತಷ್ಟು ಕೊಡುಗೆ ನೀಡಬಹುದೆಂದು ತೋರಿಸಲಾಗಿದೆ.

ಸಾಂಸ್ಕೃತಿಕ ಲೋಕ ಅನಾವರಣ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹಾಗೂ ಕರ್ನಾಟಕ ಎಂಬ ಹೆಸರಾಗಿ 50 ವರ್ಷ ಕಳೆದ ಸವಿ ನೆನಪಿಗಾಗಿ ದೇವಾಲಯದ ಟ್ರಸ್ಟ್​ ಹಾಗೂ ಭಕ್ತರ ಸಹಕಾರದಿಂದ ಈ ತಿಂಗಳಲ್ಲಿ ನಡೆಯುವ ಕಾರ್ತಿಕ ಮಾಸದ ಪ್ರತಿ ಸೋಮವಾರವೂ ಕರ್ನಾಟಕದ ಸಾಂಸತಿಕ ಲೋಕವನ್ನು ಭಕ್ತರಿಗೆ ಪರಿಚಯಿಸುವ ಕೆಲಸ ಮಾಡಲು ಮುಂದಡಿ ಇಟ್ಟಿದೆ.

ಭಕ್ತಿಯ ಜತೆ ಕನ್ನಡದ ಕಂಪು ಪಸರಿಸೋಣ ಎಂಬ ಆಲೋಚನೆ ಅಡಿ ಮೊದಲ ಕಾರ್ತಿಕ ಸೋಮವಾರ ಈ ಭಾರಿ ಇಂತಹ ವಿಶೇಷ ಅಲಂಕಾರಕ್ಕೆ ಹೆಜ್ಜೆ ಇಟ್ಟಿದ್ದು, ದೇವಾಲಯದ ಗರ್ಭಗುಡಿಗೆ ಹೊಂದಿಕೊಂಡಂತೆ ಒಳಭಾಗದಲ್ಲಿ ಬೇಲೂರು ಹಳೇಬೀಡುಗಳ ಶಿಲ್ಪಕಲೆಯನ್ನು ವಿಶೇಷವಾಗಿ ಚತ್ರಿಸಿ ಕಲಾಕೃತಿಗಳನ್ನು ದೇವಾಲಯದಲ್ಲಿ ಅಲಂಕಾರ ಮಾಡಲಾಗಿದೆ. ಹಾಗೆಯೇ ಕರ್ನಾಟಕದ ಮೊದಲುಗಳು ಹಾಗೂ ಕರ್ನಾಟಕದ ವೈವಿಧ್ಯತೆಗಳ 120ಕ್ಕೂ ಅಧಿಕ ಚಿತ್ರ ಪಟಗಳ ಮಾಹಿತಿ ಒಳಗೊಂಡ ಚಿತ್ರಣ ಹಾಕಲಾಗಿದೆ. ಜತೆಗೆ ವಿಶೇಷವಾಗಿ ಕನ್ನಡ ಧ್ವಜಗಳನ್ನು ಹಾಕಿ ಅಲಂಕರಿಸಲಾಗಿದ್ದು, ಭಕ್ತರು ದೇವಾಲಯದಲ್ಲಿ ಕನ್ನಡದ ಹಿರಿಮೆ ಸಾರುವ ಚಿತ್ರ ನೋಡಿ ಖುಷಿಗೊಂಡಿದ್ದಾರೆ.

ಪ್ರಶಸ್ತಿ ಪುರಸತರ ಪರಿಚಯ

ದೇವಾಲಯದ ಒಳಭಾಗದಲ್ಲಿ ಕರ್ನಾಟಕ ರತ್ನ, ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪಡೆದವರ ವ್ಯಕ್ತಿಗಳ ಚಿತ್ರಗಳ ಸಮೇತ ಮಾಹಿತಿ ಹಾಕಲಾಗಿದೆ. ಜತೆಗೆ ಕನ್ನಡ ಸಂಸ್ಕೃತಿ ಪ್ರತಿ ಬಿಂಬಿಸುವ ವೀರಗಾಸೆ ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ, ಹುಲಿ ವೇಷ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಕುಣಿತದ ಪರಿಚಯ ಮಾಡಿಕೊಡಲಾಗಿದೆ.

ಸಾಹಿತ್ಯ:

ಕರ್ನಾಟಕದ ವೈವಿಧ್ಯತೆ ಸಾರುವ ಸಾಧು ಸಂತರ, ಕಲೆ, ಸಾಹಿತ್ಯ, ವಿಜ್ನಾನ, ಸಂಸ್ಕೃತಿ, ಅರಣ್ಯ, ಭಾಷೆಯ ಇತಿಹಾಸ, ಸಿನಿಮಾ, ಆಧ್ಯಾತ್ಮಿಕತೆ, ದಾಸ ಸಾಹಿತ್ಯ, ವಚನ ಸಾಹಿತ್ಯ, ಹೀಗೆ ಇನ್ನೂ ಹಲವು ಮಾಹಿತಿಗಳನ್ನು ದೇವಾಲಯದಲ್ಲಿ ಕಾಣಬಹುದಾಗಿದೆ.

ಮುಂದಿನ ವಾರವೂ ಅಲಂಕಾರ

ಮೈಸೂರು ಅರಮನೆ, ಕನ್ನಡ ನಾಡಿನ ಅರಣ್ಯ ಸಂಪತ್ತು, ಹಂಪೆ, ಧರ್ಮಸ್ಥಳದ ಅಲಂಕಾರಗಳು ಸೇರಿರುತ್ತವೆ ಎನ್ನುತ್ತಾರೆ ಟ್ರಸ್ಟ್​ ನ ಸದಸ್ಯರು.

ಹಲವರ ನೆರವು

ದೇವಾಲಯದಲ್ಲಿ ಕನ್ನಡದ ಕಂಪು ಹರಿಸಲು ಟ್ರಸ್ಟ್​ ಗೌರವಾಧ್ಯಕ್ಷ ಕೆ. ಶಿವಲಿಂಗಯ್ಯ, ಅಧ್ಯಕ್ಷ ಸಿಧ್ದರಾಜು, ಕಾರ್ಯದರ್ಶಿ ಆರ್​. ಚಂದ್ರಶೇಖರ್​, ಮುಖಂಡರಾದ ಅಪ್ಪಾಜಿ, ಲಿಂಗಪ್ಪ, ಎಸ್​. ಉಮೇಶ್​, ಸುರೇಂದ್ರ, ಆನಂದ ಕಂದ, ರಮೇಶ್​, ಪ್ರಕಾಶ್​, ಅರುಣ್​ ಕುಮಾರ್​, ಹರೀಶ್​ ಕುಮಾರ್​, ದರ್ಶನ್​, ಶಶಾಂಕ್​, ನಾಗೇಶ್​ ಹಾಗೂ ಗ್ರಾಮದವರು ಭಕ್ತರು ಸಹಕರಿಸಿದ್ದಾರೆ ಎನ್ನುತ್ತಾರೆ ಸಾಹಿತಿ ಅರುಣ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net