

ಕಂಪ್ಲಿ: ತಾಲೂಕಿನ ನಂ.10ಮುದ್ದಾಪುರ ಗ್ರಾಮದ ಆರಾಧ್ಯದೈವ ಶ್ರೀ ಬಂಡೆ ಬಸವೇಶ್ವರ ಹಾಗೂ ಶರಣೆ ನೀಲಮ್ಮ ಅವರ ಗಂಗೆಸ್ಥಳ ಮೆರವಣಿಗೆ ಸೋಮವಾರ ಶ್ರದ್ಧೆ-ಭಕ್ತಿಯಿಂದ ನಡೆಯಿತು.
ಇದನ್ನೂ ಓದಿ: ವಿರುಪಣ್ಣ ತಾತನ ಗಂಗೆಸ್ಥಳ ಮೆರವಣಿಗೆ
ಮೂಕಬಸವಣ್ಣ ದೇವಸ್ಥಾನದಿಂದ ನೀಲಮ್ಮನವರ ತನುಗೊಡ, ಗೌಳೇರ ಪೇಟೆಯಿಂದ ಬಸವೇಶ್ವರ ಗಂಗೆಸ್ಥಳ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾರೋಪಗೊಂಡವು. ವೀರಗಾಸೆ ನೃತ್ಯ, ಡೊಳ್ಳುಕುಣಿತ, ತಾಷಾರಾಂಡೋಲು ಗಮನಸೆಳೆದವು.
ಪುರೋಹಿತರಾದ ಎಚ್.ಎಂ.ಶರಣಯ್ಯಸ್ವಾಮಿ, ಎಚ್.ಎಂ.ಬಸವರಾಜಸ್ವಾಮಿ, ಎಂ.ಎಸ್.ವಿರುಪಾಕ್ಷಯ್ಯಸ್ವಾಮಿ, ಶ್ರೀ ಬಂಡೆ ಬಸವೇಶ್ವರ, ಶಿವಶರಣೆ ನೀಲಮ್ಮದೇವಿ ಸೇವಾ ಸಂಘದ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಗ್ರಾಪಂ.ಅಧ್ಯಕ್ಷೆ ಸೋಮೇಶ್ವರಿ ಪರಶುರಾಮ, ಉಪಾಧ್ಯಕ್ಷೆ ಜಡೆ ಸಾವಿತ್ರಮ್ಮ ಮಹಾದೇವ, ಪ್ರಮುಖರಾದ ಗಾರೆ ಸೋಮೇಶ, ಬೂದಗುಂಪಿ ಮುರುಡ ಬಸವರಾಜ, ಜೀರು ಮಲ್ಲಪ್ಪ, ಚಂದ್ರಸ್ವಾಮಿ, ರೇಣುಕಾರಾಧ್ಯ, ಪತ್ತಾರ್ ಅಯ್ಯಪ್ಪ, ವಿಪ್ರದ ಭೀಮೇಶ್, ಬಿ.ಎಸ್.ಶಿವಮೂರ್ತಿ, ಹೊಸಕೋಟೆ ಜಗದೀಶ ಇತರರಿದ್ದರು.