ವಿರುಪಣ್ಣ ತಾತನ ಗಂಗೆಸ್ಥಳ ಮೆರವಣಿಗೆ

Kampli Meravanige
ಕಂಪ್ಲಿಯ ಹೇರೂರು ವಿರುಪಣ್ಣಗೌಡ ತಾತನ ಗಂಗೆಸ್ಥಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ ಜರುಗಿತು. ಪ್ರಮುಖರಾದ ಡಿ.ವಿ.ರಮೇಶಗುಪ್ತಾ, ಸಿ.ಎಂ.ವೀರಯ್ಯಸ್ವಾಮಿ, ಚಾಗಿ ಮಂಜುನಾಥ, ವಿ.ನೀಲಕಂಠ, ರವಿ ಚಿತ್ರಗಾರ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ತತ್ವಪದಕಾರ ಶಿವಶರಣ ಹೇರೂರು ವಿರುಪಣ್ಣಗೌಡ ತಾತನ ಗಂಗೆಸ್ಥಳ ಮೆರವಣಿಗೆ ಸೋಮವಾರ ಶ್ರದೆ-್ಧಭಕ್ತಿಯಿಂದ ಜರುಗಿತು.

ತುಂಗಭದ್ರಾ ನದಿಯಿಂದ ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹೇರೂರು ವಿರುಪನಗೌಡ ತಾತನ ಕರ್ತೃಗದ್ದುಗೆಗೆ ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅನ್ನಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಹೇರೂರು ವಿರುಪಣ್ಣ ತಾತನ ಸದ್ಭಕ್ತ ಮಂಡಳಿ ಅಧ್ಯಕ್ಷ ಡಿ.ವಿ.ರಮೇಶಗುಪ್ತಾ, ಧರ್ಮಕರ್ತ ಸಿ.ಎಂ.ವೀರಯ್ಯಸ್ವಾಮಿ, ಪದಾಧಿಕಾರಿಗಳಾದ ಚಾಗಿ ಮಂಜುನಾಥ, ವಿ.ನೀಲಕಂಠ, ರವಿ ಚಿತ್ರಗಾರ, ಯಮನೂರಪ್ಪ, ಯು.ವೆಂಕಟೇಶ, ಉಬಾಳೆ ನಾಗರಾಜ, ಅಂಚೆ ಮಾಬುಸಾಬ್, ಯು.ವಿರುಪಣ್ಣ, ಬಿ.ವಸಂತಕುಮಾರ್, ಎಸ್.ವೆಂಕಟೇಶ, ಎಂ.ಹುಲುಗಪ್ಪ, ಟಿ.ಗಂಗಣ್ಣ, ಬಿ.ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net