ಬಸವೇಶ್ವರ ಜಾತ್ರೆ ಸಂಪನ್ನ

19HALLUR1 BASAVESWAR JATRE ACHARANE
Published on

ಹಳ್ಳೂರ: ಶ್ರಾವಣ ಮಾಸದ ಅಂಗವಾಗಿ ಗ್ರಾಮದ ಬಸವೇಶ್ವರ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬಸವೇಶ್ವರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಸಲ್ಲಿಸಲಾಯಿತು. ಸಂಜೆ ಸಡಗರದೊಂದಿಗೆ ಭಕ್ತರ ಜಯೂಷಗಳ ನಡುವೆ ರಥೋತ್ಸವ ನೆರವೇರಿತು. ಭಕ್ತರು ಖಾರಿಕ್​, ಬೆಂಡು&ಬತ್ತಾಸು, ಬಾಳೆಹಣ್ಣು, ಬಿಸ್ಕತ್​ ಅರ್ಪಿಸಿದರು. ದೇವಸ್ಥಾನದಿಂದ ಗ್ರಾಮದ ಮುಖ್ಯ ರಸ್ತೆಯ ಮೂಲಕ ಮಹಾಲಕ್ಷಿ$್ಮ ಸನ್ನಿಧಾನದವರೆಗೆ ಮೆರವಣಿಗೆ ಸಾಗಿತು. ನಂದಿಕೋಲ, ಕರಡಿ ಮೇಳ ಸೇರಿ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಗ್ರಾಮಸ್ಥರು ಸದ್ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net